ವಿಟ್ಲ : ಲಯನ್ಸ್ ಕ್ಲಬ್ ವತಿಯಿಂದ ೨೦೨೦-೨೧ ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ೬೨೫ ರಲ್ಲಿ ೬೨೩ ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿಟ್ಲ ಸೈಂಟ್ ರೀಟಾ ಶಾಲೆಯ ವಿದ್ಯಾರ್ಥಿನಿ ಅಲಿಶಾ ಫ್ಲೋರಿನ್ ವೇಗಸ್ ಇವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಕೋಶಾಧಿಕಾರಿ ಗಂಗಾಧರ್, ಪ್ರಾಂತೀಯ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಸದಸ್ಯರುಗಳಾದ ಮಂಗೇಶ್ ಭಟ್, ಮುರಳಿ, ಜಲಜಾಕ್ಷಿ, ಮಾಲತಿ, ಪುಷ್ಪಲತಾ, ಎ ಪಿ ಮಂತೆರೊ ಮತ್ತು ಸುಮತಿ ಉಪಸ್ಥಿತರಿದ್ದರು.
