ಮೂಡುಬಿದಿರೆ: ಇಲ್ಲಿನ ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಬಳಿಕ ಚೇತರಿಸಿಕೊಂಡು ಬಳಿಕ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.WhatsApp Image 2021-08-10 at 2.57.23 PM (1)ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಅಮ್ಮಂಜೆ ಅವರು ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು ನಿಲ್ಲಿಸಲಾಯಿತು. ಅಮ್ಮುಂಜೆ ಅವರು ಚೇತರಿಸಿಕೊಂಡ ಬಳಿಕ ಮತ್ತೆ ಅವರು ತಮ್ಮ ಪಾತ್ರವನ್ನು ಮುಂದುವರಿಸಿದರು

By suddi9

Leave a Reply

Your email address will not be published. Required fields are marked *