ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ.ಯೋಜನೆ, ಬಂಟ್ವಾಳ ತಾಲೂಕು, ಬಿಸಿ ರೋಡ್ ವಲಯದ ಪರಿಸರ ಕಾರ್ಯಕ್ರಮವನ್ನು – ಸರಕಾರಿ ಪ್ರೌಢಶಾಲೆ ಪಂಜಿಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.f1e4ad5f-61ed-4989-8b5c-b2c428c81c42
ನಿಯತ್ರಣಕ್ಕೆ ಸಿಗದೆ ಮಾಲಿನ್ಯ ವಾಗುತ್ತಿರುವ ಪರಿಸರವನ್ನು ರಕ್ಷಿಸಿಕೊಳ್ಳಲು ಗಿಡಗಳನ್ನು ನೆಟ್ಟು ಬೆಳೆಸಿ ಉಳಿಸಿ ಕೊಳ್ಳುವುದು ಇಂದಿನ ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾಕ್ಟರ್ ಹೆಗ್ಗಡೆ ಯವರ ಮಾರ್ಗದರ್ಶನದಂತೆ ಯೋಜನೆಯ ಮೂಲಕ ನಮ್ಮ ಶಾಲೆಗೆ ಹಲವಾರು ವಿಧದ ಹಣ್ಣಿನ ಗಿಡಗಳನ್ನು ಒದಗಿಸಿರುವುದು ಮಕ್ಕಳಲ್ಲಿ ಹಸಿರು ಪ್ರೀತಿ ಬೆಳೆಯಲು ಪೂರಕವಾಗಿದೆ ಎಂದು ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ, ಸಹಕಾರಿ ಬ್ಯಾಂಕ್ ನಿರ್ದೇಶಕ  ಸುದರ್ಶನ್ ಜೈನ್ ಹೇಳಿದರು. ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.91998867-07da-4fbc-920a-f930f172567c
ಯೋಜನೆಯ ವಲಯ ಮೇಲ್ವಿಚಾರಕ  ಗೋಪಾಲ್ ಅವರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಬಿಸಿ ರೋಡ್ ವಲಯಾಧ್ಯಕ್ಷ ಶ್ರೀ ಶೇಖರ್ ಸಾಮಾನಿ, ಪ್ರೌಢ ಶಾಲಾ ಮುಖ್ಯ ಗುರುಗಳಾದ ಶ್ರೀ ದುರ್ಗಾ ಪ್ರಸಾದ್, ಒಕ್ಕೂಟ ಅಧ್ಯಕ್ಷ ಶ್ರೀ ರಾಜೇಶ್ ಗೌಡ, ಮೇಲ್ವಿಚಾರಕಿ ಶ್ರೀಮತಿ ವೇದಾವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

81e66f30-8e9c-4c6b-9171-5ce6ff34ac45
ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.ಸೇವಾ ಪ್ರತಿನಿಧಿ ರಾಘವೇಂದ್ರ ಭಟ್ ನಿರೂಪಿಸಿದರು.  ಕು. ರಕ್ಷಾ ಪ್ರಾರ್ಥಿಸಿ ಪುಷ್ಪ ಸ್ವಾಗತಿಸಿದರು. ಧನಂಜಯ  ವಂದಿಸಿದರು.

By Suddi9

Leave a Reply

Your email address will not be published. Required fields are marked *