ಬಂಟ್ವಾಳ ತಾಲ್ಲೂಕಿನ ಸರಪಾಡಿ ಸಮೀಪದ ಪೆರಿಯಪಾದೆ ಎಂಬಲ್ಲಿ ರಿಕ್ಷಾ ಅಪಘಾತದಿಂದ ಗಂಭೀರ ಗಾಯಗೊಂಡು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾಜಿ ಸಚಿವ ಬಿ.ರಮಾನಾಥ ರೈ ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಪ್ರಮುಖರಾದ ಬೇಬಿ ಕುಂದರ್, ಬಿ.ಪದ್ಮಶೇಖರ ಜೈನ್, ಬಾಲಕೃಷ್ಣ ಅಂಚನ್ ಮತ್ತಿತರರು ಇದ್ದರು.
