ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ರೂ 10 ಲಕ್ಷ ವೆಚ್ಚದ ಅನುದಾನದಲ್ಲಿ ವೀರಕಂಭ ಗ್ರಾಮದ ಕೆಲಿಂಜ- ಕಲ್ಮಲೆ ರಸ್ತೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮಾಧವ ಮಾವೆ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ಸದಸ್ಯರಾದ ರೆಹಮಾನ್, ರಘು ಪೂಜಾರಿ, ಜಯಪ್ರಸಾದ್ , ಸಂದೀಪ್, ಗುತ್ತಿಗೆದಾರ ಸಂತೋಷ್ ಶೆಟ್ಟಿ ಪೆಲ್ತಡ್ಕ, ಪ್ರಮುಖರಾದ ವಿಷ್ಣು ಭಟ್ ಅಡ್ಯೆಯಿ, ಕೊರಗಪ್ಪ ಗೌಡ, ಶಿವಪ್ಪ ಗೌಡ, ಚಿದಾನಂದ ಕಲ್ಮಲೆ, ಚಂದ್ರಶೇಖರ ಕಲ್ಮಲೆ, ನಾರಾಯಣ ರೈ, ರಾಮಕೃಷ್ಣ ರೈ , ರಮೇಶ್ ರೈ , ನರೇಶ್ ಶೆಟ್ಟಿ ಕಲ್ಮಲೆ ಮತ್ತಿತರರುಇದ್ದರು.
