ಸುಳ್ಯ ‘ಮೋರ್’ ಸೂಪರ್ ಮಾರ್ಕೆಟ್ ನ ಶುಭಾರಂಭ
ಸುಳ್ಯ :‘ಮೋರ್’ ಸೂಪರ್ ಮಾರ್ಕೆಟ್ ನ 187 ನೇ ಶಾಖೆಯು ಸುಳ್ಯ ಮುಖ್ಯ ರಸ್ತೆಯ ಜುಮ್ಮಾಮಸೀದಿಯ ಎದುರುಗಡೆ ಗೋಪಿನಾಥ್ ಬೊಳುಬೈಲು ಮಾಲಕತ್ವದ ಗೋಪಿಕಾ ಕಾಂಪ್ಲೆಕ್ಸ್ ನಲ್ಲಿ ಜು.14 ರಂದು ಮಂಗಳವಾರ ‘ಮೋರ್’ ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು.
ಇದರ ಉದ್ಘಾಟನೆಯನ್ನು ಶ್ರೀಮತಿ ಯೋಗಿತ ಗೋಪಿನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅಥಿತಿಯಾಗಿ ಪ್ರಣವ್ ಎಮ್ ಜಿ., ಸಂಜು ಸಿಂಗಪ್ಪ, ವಿಜಯ್ ಬಾಸ್ಯಮ್, ಪ್ರಗತ್ ರಾಜ್ ಸಂಸ್ಥೆಗೆ ಶುಭ ಹಾರೈಸಿದರು.ಸೂಪರ್ ಮಾರ್ಕೆಟ್ ನಲ್ಲಿ ಉತ್ತಮ ಗುಣಮಟ್ಟದ ದಿನಬಳಕೆಯ ಗೃಹೋಪಯೋಗಿ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಮಿತ ದರದಲ್ಲಿ ಲಭ್ಯವಿದೆ. ಅಲ್ಲದೆ ಶುಭಾರಂಭದ ಪ್ರಯುಕ್ತ ಸುಳ್ಯ ಆಸುಪಾಸಿನ ಗ್ರಾಹಕರಿಗೆ ಖರೀದಿಯ ಮೇಲೆ ವಿಶೇಷ ಆಫರ್ ನೀಡಲಾಗುವುದು ಎಂದು ಸಂಸ್ಥೆಯ ಮೇನೇಜರ್ ಲೋಕೇಶ್ ತಿಳಿಸಿದರು.
ಪ್ರತಿದಿನ ಬೆಳಗ್ಗೆ ಗಂಟೆ 7.00 ರಿಂದ ರಾತ್ರಿ 9.00 ರ ತನಕ ಗ್ರಾಹಕರಿಗೆ ಖರೀದಿಗೆ ಅವಕಾಶವಿರುವುದಾಗಿ ಸಂಸ್ಥೆಯಲ್ಲಿ ಸುಮಾರು 14 ಮಂದಿ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ವೆಂಕಪ್ಪ ಗೌಡ, ನ.ಪಂ.ಸದಸ್ಯರಾದ ಶರೀಫ್ ಕಂಠಿ, ಉಮ್ಮರ್, ಕೆ.ಎಸ್, ಗಣೇಶ್ ಪ್ರಿಂಟರ್ಸ್ ಮಾಲಕ ಉಮೇಶ್ ಪಿ.ಕೆ, ಲಯನ್ಸ್ ಅಧ್ಯಕ್ಷ ಆನಂದ ಪೂಜಾರಿ ಸುಳ್ಯ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್ ಎ, ಡಾ.ಹರ್ಷಿತಾ ಪುರುಷೋತ್ತಮ, ಶೈಮಾ ಜಿತೇಂದ್ರ ಎನ್. ಎ, ಪತ್ರಕರ್ತ ಗಂಗಾಧರ ಮಟ್ಟಿ, ಅಬ್ದುಲ್ ಖಾದರ್ ಬೊಳುಬೈಲು ಮತ್ತಿತರರು ಆಗಮಿಸಿ ಶುಭ ಹಾರೈಸಿದರು.