ಕೈಕಂಬ : ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ದಿ| ರುಕ್ಮಯ ಪೂಜಾರಿ ಮತ್ತು ಸರೋಜಿನಿ ದಂಪತಿಗಳ ೬ ಮಕ್ಕಳಲ್ಲಿ ೫ನೇ ಪುತ್ರನಾಗಿ ಜನಿಸಿದ ವಿಠ್ಠಲ್ ಪೂಜಾರಿಯವರು ಬಾಲ್ಯದಿಂದಲೇ ಆಧ್ಯಾಥ್ಮಿಕದ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರಿತಿಸಿಕೊಂಡು ತುಳುನಾಡಿನ ಹಲವು ಭಾಗಗಳಲ್ಲಿ ಧರ್ಮಜಾಗರಣೆಯ ಪ್ರಚಾರಕರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಹಲವು ಸಂಘಟನೆಯಲ್ಲಿ ಸದಸ್ಯನಾಗಿ ದುಡಿದಿದ್ದು ಇತ್ತೀಚಿಗೆ ಉತ್ತರಭಾರತದ ಭದ್ರಿನಾಥ, ಹರಿದ್ವಾರ, ಕೇದಾರನಾಥಗಳಿಗೆ ಯಾತ್ರೆ ಮಾಡಿ ಕುಠೀರದಲ್ಲಿ ವಾಸವಾಗಿ ಆದ್ಯಾಥ್ಮಿಕದ ಸಾಧನೆಯನ್ನು ಮಾಡುತ್ತಿದ್ದು ಕುಂಭಮೇಳದಲ್ಲಿ ಆನಂದ ಅಖಾಡದ ಪರಮಹಂಸ ಬಾಬಾ ಶ್ರೀ ಬನ್ಖಂಡಿಯವರ ಶಿಷ್ಯನಾಗಿ ದೀಕ್ಷೆ ಪಡೆದು ತಪೋನಿಧಿ ”ಬಾಬಾ ವಿಠ್ಠಲ್ ಗಿರಿ ಮಹಾರಾಜ್‌ಜೀ” ಎಂಬ ಆದ್ಯಾಥ್ಮದ ಹೆಸರನ್ನು ಪಡೆದಿದ್ದಾರೆ.



