ಕೈಕಂಬ: ಮಂಗಳೂರು ತಾಲೂಕು ಕುಳವೂರು ಗ್ರಾಮದ ಹಿರಿಯ ಕೃಷಿಕ ಜಾರಪ್ಪ ಆಳ್ವ ಗುಂಡ್ಯ(98) ಅವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರ ಮುಂಜಾನೆ ನಿಧನರಾದರು.
ಮುತ್ತೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಸೇರಿದಂತೆ ಮೃತರಿಗೆ 3 ಪುತ್ರರು, 2 ಪುತ್ರಿಯರು ಹಾಗೂ ಪತ್ನಿ ಇದ್ದಾರೆ. ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ,ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಶೆಟ್ಟಿ, ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ ಹಾಗೂ ಕುಪ್ಪೆಪದವು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಗಳ ಸದಸ್ಯರುಗಳು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.