ಕೈಕಂಬ : ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನೇ ಆಡಳಿತ ಮಂತ್ರವನ್ನಾಗಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಭಾನುವಾರ ಮಾಜಿ ಶಾಸಕ ಮೊಯಿದಿನ್ ಬಾವಾ ನೇತೃತ್ವದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಗುರುಪುರ ಕೈಕಂಬ, ವಾಮಂಜೂರು ಮತ್ತು ಕೊಂಪದವು ಪೆಟ್ರೋಲ್ ಬಂಕ್ ಎದುರು ಜಾಗಟೆ ಬಾರಿಸಿ, ತೈಲರಹಿತ ವಾಹನ ತಳ್ಳಿ `೧೦೦ ನಾಟೌಟ್’ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರನ್ನುದ್ದೇಶಿಸಿ ಬಾವಾ ಮಾತನಾಡಿ, ಅಧಿಕಾರಕ್ಕೇರುವ ಮುಂಚೆ ೩೦ ರೂಗೆ ಪೆಟ್ರೋಲ್, ೨೫೦ ರೂಗೆ ಅಡುಗೆ ಅನಿಲ ನೀಡುತ್ತೇವೆ, ದೇಶವಾಸಿಗಳಿಗೆ `ಅಚ್ಛೇ ದಿನ್ ಆಯೇಗಾ’ ಎಂದು ಬೊಗಳೆ ಬಿಟ್ಟಿದ್ದ ಪ್ರಧಾನಿ ಮೋದಿ, ಕಳೆದ ಏಳು ವರ್ಷಗಳಲ್ಲಿ ತೈಲ ಬೆಲೆ ಗಗನಕ್ಕೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ, ದೇಶವಾಸಿಗಳಿಗೆ ಮೋಸ ಮಾಡಿದ್ದಾರೆ. ಸುಳ್ಳು ಮತ್ತು ನಾಚಿಗೆಗೇಡು ಆಶ್ವಾಸನೆಗಳಿಗೆ ಹೆಸರುವಾಸಿ ಪ್ರಧಾನಿ ಮೋದಿ ಎಂದು ಟೀಕಿಸಿದರು.
ದೇಶವು ಈಗ ಕೊರೊನಾ ಸಂಕಷ್ಟದಲ್ಲಿ ನಲುಗಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪೆಟ್ರೋಲ್‌ಗೆ ೧೦೦ರ ಗಡಿ ದಾಟಿದೆ. ಜನವಿರೋಧಿ ಧೋರಣೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮುಂದಿನ ಬಾರಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಬಾವಾ ಹೇಳಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಗಣೇಶ್ ಮಾತನಾಡಿ, ತೈಲ ಏರಿಕೆಯಿಂದ ಈ ದೇಶದ ಬೊಕ್ಕಸಕ್ಕೆ ನಯಾಪೈಸೆ ಲಾಭವಾಗದಿದ್ದರೂ ಅದಾನಿ, ಅಂಬಾನಿಯವರAತಹ ಕಂಪೆನಿಗಳಿಗೆ ಕೋಟ್ಯಂತರ ರೂ ಆದಾಯವಾಗಿದೆ ಎಂದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದರು. ಕಾಂಗ್ರೆಸ್ ಮುಖಂಡರಾದ ಫಾಸ್ಕಲ್ ಫೆರ್ನಾಂಡಿಸ್, ಜಿ ಸುನಿಲ್, ಪುರುಷೋತ್ತಮ ಮಲ್ಲಿ, ವಿನಯ ಕುಮಾರ್ ಶೆಟ್ಟಿ, ಬಾಷಾ ಮಾಸ್ಟರ್, ಟಿ ಎಂ ಇರ್ಫಾನ್, ಮುಫೀದ್ ಅಡ್ಡೂರು, ಚಂದ್ರಹಾಸ ಶೆಟ್ಟಿ, ಹೆರಾಲ್ಡ್ ಲೋಬೊ, ದಾವೂದ್, ಹರೀಶ್ ಭಂಡಾರಿ, ಶೇಖ್, ಮೊÊದಿನ್ ಬಾವಾ ಬಡಗಎಡಪದವು, ಸಂದೇಶ ಲೋಬೊ, ರಜಾಕ್ ಮಳಲಿ, ಅಝೀಝ್ ಕಂದಾವರ, ಕೊಂಪದವಿನಲ್ಲಿ ಮುಚ್ಚೂರು ಗ್ರಾಪಂ ಸದಸ್ಯ ರಾಜೇಂದ್ರ ಪಿಂಟೊ, ಲ್ಯಾನ್ಸಿ ವಾಝ್, ವಿನ್ಸೆಂಟ್ ಮೋರಸ್, ವೀರೇಂದ್ರ ಸಾಲ್ಯಾನ್, ಲೋಕೇಶ್, ಮೋಹನ್ ಹಾಗೂ ವಾಮಂಜೂರಿನಲ್ಲಿ ಲಾರೆನ್ಸ್ ಡಿ’ಸೋಜ, ರಾಜ್‌ಕುಮಾರ್ ಶೆಟ್ಟಿ, ಶ್ರೀಧರ್ ಬೊಂಡAತಿಲ, ರೋಹಿತ್ ಬೊಂಡAತಿಲ, ಬಾಲಕೃಷ್ಣ ಕರ್ಕೇರ, ಸದಾಶಿವ ಅಮೀನ್, ಕೃಷ್ಣ ಕೋಟ್ಯಾನ್ ಸದಾಶಿವ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
