Published On: Tue, Jun 8th, 2021

ಮೂಡುಬಿದಿರೆ : ಹಿಂದೂ ಸಂಘಟನೆಗಳಿAದ 240 ಕುಟುಂಬಗಳಿಗೆ ಆಹಾರದ ನೆರವು

ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಕರಾವಳಿ ಕೇಸರಿ ಸೇವಾ ಟ್ರಸ್ಟ್ ಬೆದ್ರ ಇವುಗಳ ಜಂಟಿ ಆಶ್ರಯದಲ್ಲಿ ಬನ್ನಡ್ಕ ರಾಘವೇಂದ್ರ ಮಠದ ಸಭಾಭವನದಲ್ಲಿ 240 ಬಡ ಕುಟುಂಬಗಳಿಗೆ ಆಹಾರ ನೆರವನ್ನು ನೀಡಲಾಯಿತು.ಹಿಂದು ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೋವಿಡ್ ಅತೀ ವೇಗದಲ್ಲಿ ಹೆಚ್ಚುತ್ತಿದೆ.dd34067c-af72-47ad-914c-73d874015fbf

ನಾವು ಇತರ ದೇಶಗಳ ಬಗ್ಗೆ ನಮ್ಮ ದೇಶವನ್ನು ತುಲನೆ ಮಾಡಿ ಅಲ್ಲಿ ಯಾಕೆ ಲಾಕ್‌ಡೌನ್ ಮಾಡುತ್ತಿಲ್ಲ ಎಂಬುದರ ಬಗ್ಗೆ ಮಾತನಾಡುತ್ತೇವೆ ಆದರೆ ಫಾರಿನ್‌ಗಳಲ್ಲಿ ಕಾನೂನುಗಳನ್ನು ಪಾಲಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ನಮ್ಮ ಬಡತನ ರೇಖೆ ಜಗತ್ತಿನಲ್ಲಿ ಶೇ 40ಕ್ಕಿಂತಲೂ ಕಡಿಮೆ ಇದೆ ಆದ್ದರಿಂದ ಆಹಾರದ ಕೊರತೆ ಬರುವುದು ಸಹಜ.

ಈ ಸಂದರ್ಭದಲ್ಲಿ ಯಾರಿಗೆ ಆಹಾರದ ಅನಿವಾರ್ಯತೆ ಇದೆ ಎಂಬುದನ್ನು ತಿಳಿದುಕೊಂಡು ಮನೆ ಮನೆಗಳಿಗೆ ಹೋಗಿ ಆಹಾರದ ನೆರವನ್ನು ನೀಡುವುದು ಸಾಮಾಜಿಕ ಸಂಘಟನೆಗಳ ಜವಾಬ್ದಾರಿಯಾಗಿದೆ ಎಂದ ಅವರು ಕೋವಿಡ್‌ನಲ್ಲಿ ಮರಣ ಹೊಂದಿದವರ ಶವ ಸಂಸ್ಕಾರವನ್ನೂ ಸಂಘಟನೆಯು ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಪ್ರಧಾನ ಕಾರ್ಯದರ್ಶಿ ಸಂದೀಪ್ ಆಂಬ್ಲಮೊಗರು, ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ದರೆಗುಡ್ಡೆ ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಪ್ರಚಾರ ಪ್ರಮುಖ್ ರಾಜೇಶ್, ಉಪಾಧ್ಯಕ್ಷ ನಾಗೇಶ್ ಕುಲಾಲ್, ಕಾರ್ಯದರ್ಶಿ ಸಂದೀಪ್ ಹೆಗ್ಡೆ, ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿದರು. ಹಿಂದು ಜಾಗರಣ ವೇದಿಕೆಯ ಯುವ ವಾಹಿನಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter