ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಿಸಿಬಿ ಪೋಲೀಸರನ್ನು ದುರುಪಯೋಗಪಡಿಸಿಕೊಂಡು ಅಮಾಯಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದು ಅಧಿಕಾರದ ದುರುಪಯೋಗ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶರಣ್ ಪಂಪ್‌ವೆಲ್ ಎಂಬ ಕ್ರಿಮಿನಲ್ ವ್ಯಕ್ತಿಯೊಬ್ಬರ ಬಗ್ಗೆ ಟ್ರೋಲ್ ಮಾಡಲಾಗಿದೆ ಎಂಬ ಆರೋಪದ ಮೇಲೆ ಮೂಡುಬಿದಿರೆ ಯುವ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಜಯಕುಮಾರ್ ಶೆಟ್ಟಿ ಅವರನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಹೀಗೆ ಹಲವು ಯುವಕರಿಗೆ ತೊಂದರೆ ಕೊಟ್ಟಿದ್ದಾರೆ. ಮೆಸೇಜ್‌ಗಳನ್ನು ಶೇರ್ ಮಾಡುವುದು ಅಪರಾಧವೇ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಜಿಲ್ಲಾಡಳಿತ ಕೋರ್ಟಿಗಿಂತಲೂ ದೊಡ್ಡದೇ? ಎಂದು ಅವರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಈ ಬೆಳವಣಿಗೆಯನ್ನು ಖಂಡಿಸಿದರು.21e683f5-817d-467a-be3b-7a497df80a0e

ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಜಿಲ್ಲಾಡಳಿತ ಕಾನೂನು ಪಾಲಿಸುವ ಬದಲು ರಾಜಕಾರಣಿಗಳ ಓಲೈಕೆಯಲ್ಲಿ ತೊಡಗಿದೆ. ಜಿಲ್ಲಾಕಾಂಗ್ರೆಸ್ ವತಿಯಿಂದ ಲಾಕ್‌ಡೌನ್ ಮುಗಿದ ಬಳಿಕ ಈ ಘಟನೆಯನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಯಲಿದೆ ಎಂದ ಅವರು ಇತ್ತೀಚಿಗೆ ಗಾಂಜಾ ಸ್ಮಗ್ಲಿಂಗ್ ಪ್ರಕರಣದಲ್ಲಿ ಜಿಲ್ಲಾಡಳಿತ ಮಾಡಿದ ಸಾಧನೆ ಮೆಚ್ಚುವಂತಹದ್ದು. ಆದರೆ ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸಿದಾಗ ಅದನ್ನು ಸಹಿಸಲಾಗದು ಎಂದರು. ರಾಜ್ಯದಲ್ಲಿ ಇಂತಹ ಬೆಳವಣಿಗೆಗಳು ನಡೆದಾಗ ಪ್ರಶ್ನಿಸಬೇಕಾದ ಹೊಣೆಗಾರಿಕೆ ಇರುವ ಸರಕಾರ ಇಲ್ಲವೇ ಇಲ್ಲ. ಇದ್ದಿದ್ದರೆ ಚಾಮರಾಜನಗರದಲ್ಲಿ ಆಕ್ಸಿಜನ್ ಕಾರಣಕ್ಕೆ ಹಲವರ ಮಾರಣ ಹೋಮ ನಡೆದಾಗ ಅವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವ ಮಾತು ಹಾಗಿರಲಿ, ಪ್ರಶ್ನಿಸಲೂ ಸರಕಾರ ಮುಂದಾಗಲಿಲ್ಲ ಎಂದವರು ಆರೋಪಿಸಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಲೆರಿಯನ್ ಸಿಕ್ವೇರಾ, ಜಿಲ್ಲಾ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ವಕ್ತಾರ ರಾಜೇಶ್ ಕಡಲಕೆರೆ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *