ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಅಕ್ರಮ ರೆಮ್ಡಿಸಿವರ್ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದ ವೈದ್ಯನನ್ನು ಸಂಜಯ್ ನಗರದ ಇನ್ಸ್ ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಇವರ ನೇತ್ರತ್ವದಲ್ಲಿ ಹಿಡಿದು ಬಂಧಿಸಿದರು. 
ರೆಮ್ಡಿಸಿವರ್ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದವೈದ್ಯ ವೀಡಿಯೋ ಬಿಡುಗಡೆ ಮಾಡಿ “ನನಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಮತ್ತು ನನ್ನಿಂದ ಹಣವನ್ನು ಕಿತ್ತುಕೊಂಡಿದ್ದಾರೆ ಎಂಬ ಸುಳ್ಳು ಮಾಹಿತಿ ಇದ್ದ ವೀಡಿಯೋ ವೈದ್ಯ ಬಿಡುಗಡೆಗೊಳಿಸಿದ್ದ” ಇದನ್ನೇ ಬಂಡವಾಳವನ್ನಾಗಿಸಿದ ಕೆಲವು ನಕಲಿ ವೈದ್ಯರುಗಳು ತನ್ನ ಬುಡಕ್ಕೆ ಬೆಂಕಿ ಬೀಳುವ ಲಕ್ಷಣದಿಂದ ಹೆದರಿದ ಕೆಲವು ರಾಜಕೀಯ ಶಕ್ತಿಗಳ ಒತ್ತಡದಿಂದ ಉನ್ನತ ಪೊಲೀಸ್ ಅಧಿಕಾರಿಗಳು ಕಾತ್ಯಾಯಿನಿ ಆಳ್ವ ಅವರನ್ನು ಅಮಾನತು ಮಾಡಿದ್ದಾರೆ..
ವ್ಯಾಪಕ ಪ್ರಶಂಸೆಗೆ ಕೂಡ ಒಳಪಟ್ಟಿದ್ದರು ಕಾತ್ಯಾಯಿನಿ ಆಳ್ವ..!
ಸಾರ್ವಜನಿಕರಿಂದ ಮತ್ತು ಸಿಬ್ಬಂದಿಗಳಿಂದ ಉತ್ತಮ ಪೊಲೀಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದ ಕಾತ್ಯಾಯಿನಿ ಆಳ್ವ ಅಮಾನತು ಸಮಾಜಕ್ಕೇ ತಪ್ಪು ಸಂದೇಶ ನೀಡುವ ಆಗಿದೆ ಇದನ್ನು ಉನ್ನತ ಅಧಿಕಾರಿಗಳು ತಿಳಿದು ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂಬುದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಎಲ್ಲರ ಒತ್ತಾಯವಾಗಿದೆ.
ನಮಗೆ ಎಲ್ಲರಿಗೂ ತಿಳಿದ ಒಬ್ಬ ಪ್ರತಿಭಾನ್ವಿತ ಪ್ರಾಮಾಣಿಕ ಅಧಿಕಾರಿಯಾಗಿದ್ದ ಬಂಟ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಮೇಲಾಧಿಕಾರಿಗಳ ಈ ರೀತಿಯ ಕಾನೂನು ಬಾಹಿರ ಕ್ರಮ ಸರಿಯಲ್ಲ ಬಂಟ ಸಮುದಾಯಕ್ಕೆ ಅವಮಾನ ಆಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಖೇದವ್ಯಕ್ತಪಡಿಸಿದರು.
ಹೆಣ್ಣು ಮಗಳ ಜೊತೆ ನಾವೆಲ್ಲಾ ಇದ್ದೇವೆ ಈ ವಿಚಾರದಲ್ಲಿ ಮಾನ್ಯ ಹಾಗೂ ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಮತ್ತು ಜಿಲ್ಲೆಯ ಎಲ್ಲಾ ಶಾಸಕರ ಬಳಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ , ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಶ್ರೀ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಶ್ರೀ ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಸಂಕಬೈಲ್ ಸತೀಶ್ ಅಡಪ್ಪ ಅವರುಗಳು ಚರ್ಚಿಸಲಿದ್ದಾರೆ
ನಮ್ಮ ಬಂಟ ಸಮಾಜದ ಕರ್ತವ್ಯ ನಿಷ್ಟ ಅಧಿಕಾರಿ ಕಾತ್ಯಾಯಿನಿ ಆಳ್ವರವರ ಅಮಾನತು ಆದೇಶ ಹಿಂತೆಗೆದುಗೊಳ್ಳಬೇಕುಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
