ಬಂಟ್ವಾಳ: ಟಾಸ್ಕ್ ಪೋರ್ಸ್, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ತಮ ಕೆಲಸ ಮಾಡಿದರೆ ಮಾತ್ರ ಕೊರೊನಾ ಹಿಮ್ಮಟ್ಟಿಸಲು ಸಾಧ್ಯ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಶುಕ್ರವಾರ ಕೊಳ್ನಾಡು ಗ್ರಾ.ಪ.ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.ಕೊರೊನಾ ನಿಯಂತ್ರಣದ ದೃಷ್ಟಿಯಿಂದ ಟಾಸ್ಕ್ ಫೋರ್ಸ್ ಸಮಿತಿಗೆ ಯಾವುದೇ ಮುಲಾಜಿ ಬೇಡ, ನಿಯಮ ಪಾಲನೆ ಮಾಡದವರ ಮೇಲೆ ಕಾನೂನು ಕ್ರಮಕೈಗೊಳ್ಳಿ ಎಂದರು.ಕೋವಿಡ್ ನಿಯಂತ್ರಣಕ್ಕಾಗಿಪ್ರತಿಯೊಬ್ಬರೂ ಜವಬ್ದಾರಿ ಅರಿತು ಕೆಲಸ ಮಾಡಿ, ಪರಸ್ಪರ ಆರೋಪ ಪ್ರತ್ಯಾರೋಪಗಳ ಮಾಡಿಕೊಂಡು ಸಮಯ ವ್ಯರ್ಥಮಾಡುವ ಕಾಲವಲ್ಲ, ಎಂದು ಅವರು ಹೇಳಿದರು.
ಲಸಿಕೆ ಶೀಘ್ರವಾಗಿ ಎಲ್ಲರಿಗೂನೀಡುವ ವ್ಯವಸ್ಥೆ ಮಾಡಲಾಗುತ್ತದೆ, ಅದರೆ ಲಸಿಕೆ ಪಡೆಯುವವರೆಗೆ ಹೆಚ್ಚು ಜಾಗೃತೆಯಿಂದ ಇರಬೇಕು, ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಅವರು ಹೇಳಿದರು.ಪ್ರತಿಯೊಬ್ಬರೂ ವ್ಯಾಕ್ಸಿನೇಷನ್ ಪಡೆಯುವ ಮೂಲಕ ಕೋವಿಡ್ ನಿಂದ ಮುಕ್ತವಾಗಬೇಕು ಎಂದು ಅವರು ಹೇಳಿದರು.ನಿಮ್ಮ ನಿಮ್ಮ ಗ್ರಾಮವನ್ನು ಕೋವಿಡ್ ನಿಂದ ಮುಕ್ತಮಾಡಲು ಪ್ರತಿಯೊಬ್ಬರೂ ಪಣತೊಡಬೇಕು
ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಕಿತರ ಬಗ್ಗೆ ಮಾಹಿತಿ ಪಡೆದು ಅವರಲ್ಲಿ ಸೊಂಕು ಲಕ್ಷಣಗಳಿದ್ದರೆ ಅವರನ್ನು ಕೋವಿಡ್ ಪರೀಕ್ಷೆ ಮಾಡಿಸಿ ಉಳಿದಂತೆ ಸಂಪರ್ಕಿತರ ಮೇಲೆ ನಿಗಾ ಇರಲಿ ಎಂದು ಅವರು ಹೇಳಿದರು.ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷ ರ ನೇತೃತ್ವದಲ್ಲಿ ಜತೆಯಾಗಿ ಕೆಲಸ ಮಾಡಿ ಎಂದು ಅವರು ಹೇಳಿದರು.ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಕೆಲಸಗಳ ವಿವರ ನಿಮ್ಮ ಬಳಿ ಇರಬೇಕು.
ಪ್ರಸ್ತುತ ಕೊಳ್ನಾಡು ಗ್ರಾಮದಲ್ಲಿ 6 ಕೊರೊನಾ ಸೊಂಕಿತ ಪ್ರಕರಣಗಳಿದ್ದು ಎಲ್ಲರೂ ಹೋಮ್ ಐಸೋಲೇಶನ್ ನಲ್ಲಿದ್ದು ಆರೋಗ್ಯ ವಂತರಾಗಿದ್ದಾರೆ ಎಂಬುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್.ಆರ್ ಕೋವಿಡ್ ಲಸಿಕೆ ಪಡೆಯುವ ಮಾಹಿತಿ ನೀಡಿದರು. ಕೋವಿಡ್ ಲಸಿಕೆ ಬಗ್ಗೆ ಅನಾವಶ್ಯಕ ಗೊಂದಲ ಮಾಡಿಕೊಳ್ಳಬಾರದು.ಎಲ್ಲರಿಗೂ ಲಸಿಕೆ ನೀಡುವ ಕೆಲಸ ಇಲಾಖೆಯಿಂದ ಆಗುತ್ತದೆ ಎಂದು ಅವರು ತಿಳಿಸಿದರು.ಗ್ರಾ.ಪಂ. ಅಧ್ಯಕ್ಷೆ ನೆಬಿಸಾ, ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಆಯಿಶಾಬಾನು, ತಹಶಿಲ್ದಾರ್ ರಶ್ಮಿ. ಎಸ್.ಅರ್,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿತಹಶಿಲ್ದಾರ್ ರಶ್ಮಿ. ಎಸ್.ಅರ್. ತಾ.ಪಂ.ಇ.ಒ.ರಾಜಣ್ಣ,ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣಿಕ ಅನಿಲ್, ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
