ಬಂಟ್ವಾಳ: ತಾಲೂಕಿನ ಮಾಣಿಯಲ್ಲಿಲಾಕ್ ಡೌನ್ ಸಮಯದಲ್ಲಿ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯಿಂದ ರೇಷನ್ ಸಾಗಿಸಲು ಕಷ್ಟ ಪಡುವುದನ್ನು ಕಂಡ ಸ್ತಳೀಯ ಮಾಣಿ ಗ್ರಾಮ ಪಂಚಾಯತ್ ಗ್ರಾಮಸ್ಥರಿಗೆ ಉಚಿತ ರಿಕ್ಷಾ ವ್ಯವಸ್ಥೆ ಮಾಡುವ ಮೂಲಕ ಮಾದರೀ ಜನಸ್ನೇಹಿ ಸೇವೆಯನ್ನು ಆರಂಭಿಸಿದ್ದು ಈ ಸೇವೆ ಸಾರ್ವಜನಿಕ ವಲಯದಲ್ಲಿ ಬಹಳ ಪ್ರಶಂಸೆ ಗೆ ಪಾತ್ರ ವಾದ ಘಟನೆ ಮಾಣಿಯಿಂದ ವರದಿಯಾಗಿದೆ.53721bab-0f6a-45c0-9528-b592cbe65890

ಮಾಣಿ ಗ್ರಾಮದ ವ್ಯಾಪ್ತಿಯಲ್ಲಿಮಾಣಿ ಸೊಸೈಟಿಯಿಂದ ತುಂಬಾ ದೂರದಿಂದ ಜನರು ರೇಶನ್ ಕೊಂಡು ಹೋಗುತ್ತಾರೆ. ಲಾಕ್ ಡೌನ್ ಸಮಯದಲ್ಲಿ ವಾಹನ ಸೌಕರ್ಯ ಇಲ್ಲದೆ,ತಲೆ ಹೊರೆಯಲ್ಲಿ ಕೂಡ ರೇಷನ್ ಕೊಂಡೊಯ್ಯಲಾಗದೆ ಬಹಳ ಅನಾನುಕೂಲ ಆಗುತ್ತಿತ್ತು ಎನ್ನಲಾಗಿದೆ ರೇಷನ್ ಪಡೆದು ಮನೆಗೆ ಸಾಗಿಸುವ ಗ್ರಾಮಸ್ಥರಿಗೆ ಪಂಚಾಯತ್ ವತಿಯಿಂದ ಉಚಿತ ವಾಹನ (2 ರಿಕ್ಷಾ)ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ.

ನಾಳೆ ಕೂಡ ಎರಡು ರಿಕ್ಷಾ ಗಳ ಸಂಖ್ಯೆ ಯನ್ನು ಹೆಚ್ಚಿಸುವ ಬಗ್ಗೆ ಪಂಚಾಯತ್ ಇರಾದೆಯಲ್ಲಿದ್ದು ನಾಳೆಯಿಂದ ವ್ಯವಸ್ತಿತ ವಾಗಿ ಪಂಚಾಯತ್ ಲೆಕ್ಕದಲ್ಲಿ ಜನಸ್ನೇಹಿ ಸೇವೆಯನ್ನು ಮುಂದುವರಿಸುವ ಸಾದ್ಯತೆ ಇದೆ ಎನ್ನಲಾಗಿದೆ. ಈ ಪಂಚಾಯತ್ ನ ಜನಸ್ನೇಹಿ ಸೇವೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ.

By Suddi9

Leave a Reply

Your email address will not be published. Required fields are marked *