Published On: Fri, May 7th, 2021

ಟಫ್ ರೂಲ್ಸ್ ಜಾರಿ: ನಿಗಧಿತ ಸಮಯದಲ್ಲಿ ಮೂಡುಬಿದಿರೆಯಲ್ಲಿ ಜನಜಂಗುಳಿ

ಮೂಡುಬಿದಿರೆ: ಕೊರೊನಾ ನಿಯಂತ್ರಣಕ್ಕಾಗಿ ದ.ಕ ಜಿಲ್ಲೆಯಾದ್ಯಂತ ಟಫ್ ರೂಲ್ಸ್ ಜಾರಿಯಾಗಿದ್ದು, ಮೂಡುಬಿದಿರೆ ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆ 6.30ರಿಂದಲೇ ಅಂಗಡಿ- ಮುಂಗಟ್ಟು, ತರಕಾರಿ, ಹೂವಿನ ಅಂಗಡಿ ಮತ್ತು ಮೆಡಿಕಲ್ ಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ವ್ಯವಹಾರ ವಹಿವಾಟುಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ.wpid-img-20210507-wa00785934320482580551333.jpg

ವಾಹನ ದಟ್ಟನೆ ಹೆಚ್ಚಾಗಿದ್ದುದರಿಂದ ಟ್ರಾಫಿಕ್ ಸಮಸ್ಯೆಯೂ ಕಂಡು ಬಂತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್ .ದಿನೇಶ್ ಕುಮಾರ್ ಮತ್ತು ಸಿಬಂದಿಗಳ ಪ್ರಯತ್ನದಿಂದ ವಾಹನ ದಟ್ಟಣೆ ಕಡಿಮೆಯಾಗಿದೆವ್ಯಾಪಾಸ್ಥರು 9 ಗಂಟೆಯೊಳಗೆ ವ್ಯವಹಾರವನ್ನು ನಿಲ್ಲಿಸುವಂತೆ ಮತ್ತು ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಪೊಲಿಸರು ಸೂಚನೆಗಳನ್ನು ‌ನೀಡಿದರು. ಕಾನೂನನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆಯನ್ನು ನೀಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter