ಮೂಡುಬಿದಿರೆ: ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮೂಡುಬಿದಿರೆ ಸಾವಿರಕಂಬ ಬಸದಿಗೆ ಭೇಟಿ ನೀಡಿ, ಮೂಡಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ಬಾಮೀಜಿ ಅವರ ಜೊತೆ ಕೋವಿಡ್ ಬಗ್ಗೆ ಸಮಾಲೋಚಿಸಿದರು.
ಅಯುಕ್ತರು ಮೂಡು ಬಿದಿರೆ ಬಸದಿ ರಕ್ಷಣೆ ಗೆ ಕೈಗೊಂಡ ಕ್ರಮ ಗಳ ಬಗ್ಗೆ ಮಾಹಿತಿ ಪಡೆದರು.ಭಟ್ಟಾರಕ ಕೊರೊನ ಕಾಲದಲ್ಲೂ ಶಾಂತಿ ಸುವ್ಯ ವಸ್ಥೆ ಯ ಸೇವಾ ತತ್ಪರರಾದ ಪೊಲೀಸ್ ಇಲಾಖೆ ಹಾಗೂ ಸಮಸ್ತ ರಿಗೆ ಅರೋಗ್ಯ ಶಾಂತಿ ಪ್ರಾಪ್ತಿ ಯಾಗಲೆಂದು ಭಗವಾನ್ ಶ್ರೀ 1008 ಚಂದ್ರ ನಾಥ ಸ್ವಾಮಿ ಯಲ್ಲಿ ಪ್ರಾರ್ಥಿಸಿ ಹರಸಿ ಆಶೀರ್ವದಿಸಿದರು. ಮೂಡುಬಿದಿರೆ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿ.ಎಸ್ ಉಪಸ್ಥಿತರಿದ್ದರು.
