ಕಾರ್ಕಳ : ಭಾರತೀಯ ಕಿಸಾನ್ ಸಂಘ (ರಿ.)ಕಾರ್ಕಳ, ಸಹಕಾರ ಭಾರತಿ ಕಾರ್ಕಳ ಹಾಗೂ ಗ್ರಾಮ ವಿಕಾಸ ಸಮಿತಿ ಕಾರ್ಕಳ ಇವರ ಜಂಟಿ ಸಂಯೋಜನೆಯಲ್ಲಿ ಕಾರ್ಕಳ ತಾಲೂಕು ಭೂಮಿ ಸುಪೋಷಣ ಕಾರ್ಯಕ್ರಮದ ಚಾಲನೆಯು ಇರ್ವತ್ತೂರು ಸಾಧನಾ ನರ್ಸರಿ ಶ್ರೀನಿವಾಸ್ ಭಟ್ ರವರ ಸಭಾಭವನದಲ್ಲಿ ನಡೆಯಿತು.

ರಾಷ್ಟೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಕಾರ್ಯವಾಹ ಡಾ|ವಾದಿರಾಜ ಗೋಪಾಡಿ ಇವರು ಭೂಮಿ ಸುಪೋಷಣ ಕಾರ್ಯಕ್ರಮದ ಮಹತ್ವವನ್ನು ತಿಳಿಸುತ್ತಾ ಭೂಮಿ ಸುಪೋಷಣ ಕಾರ್ಯಕ್ರಮವು ಪ್ರತಿ ಗ್ರಾಮ ಗ್ರಾಮಗಳಲ್ಲೂ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೈನ್ ನಿಟ್ಟೆ, ಶ್ರೀನಿವಾಸ್ ಭಟ್ ದಂಪತಿಗಳು, ಇರ್ವತ್ತೂರು ಅನಂತ್ ಭಟ್ ದಂಪತಿಗಳು, ಕಾರ್ಕಳ ಗ್ರಾಮ ವಿಕಾಸ ಸಮಿತಿ ಪ್ರಮುಖ್ ಗುರುಪ್ರಸಾದ್ ಕಿಣಿ ದೊಂಡೇರಂಗಡಿ, ಸಹಕಾರ ಭಾರತಿಯ ಹಿರಿಯರಾದ ಬೋಳ ಸದಾಶಿವ ಶೆಟ್ಟಿ, ಸುಭಿಕ್ಷಾ ಸಾವಯವ ಸಂಘದ ಚಂದ್ರಹಾಸ್ ಶೆಟ್ಟಿ ಇನ್ನಾ ಹಾಗೂ ಭಾರತೀಯ ಕಿಸಾನ್ ಸಂಘದ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *