ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ಮರುದಿನ ಉಳ್ಳಾಕ್ಲು ಮಗ್ರಂತಾಯಿ ದೈವದ ನೇಮ  ನಡೆಯಿತು. ತುಪ್ಪೆಕಲ್ ಮಗೃಂತಾಯಿ ದೈವದ   ಗಡಿಕಾರ  ಅರ್ಕುಳ ಕಂಪ ಸದಾನಂದ ಆಳ್ವ ಅವರು  ಸ್ನಾನ ಕ್ಕೆಂದು ಹೋದವರು  ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು   ಬಿಟ್ಟು ಬಂದಿದ್ದರು.   ದೇವಳದ ಸಿಬ್ಬಂದಿ ರವಿ ಉಗ್ರಾಣಿಗೆ ಸಿಕ್ಕಿದ  ಚಿನ್ನಾಭರಣವನ್ನು ದೇವಳದ ಕಛೇರಿಯಲ್ಲಿ  ನೀಡಿದರು. WhatsApp Image 2021-04-14 at 4.35.32 PM

  ಪೊಳಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ   ಅವರು  ಸದಾನಂದ  ಆಳ್ವರಿಗೆ ಕರೆ ಮಾಡಿದಾಗ ಆಳ್ವರ ಚಿನ್ನಾಭರಣವೆಂದು ಗೊತ್ತಾಯಿತು.  ಆಳ್ವರು  ಪೊಳಲಿ ಕ್ಷೇತ್ರಕ್ಕೆ ಬಂದು ಚಿನ್ನಾಭರಣ ಪಡೆದು  ಪ್ರಾಮಾಣಿಕತೆ ಮೆರೆದ ಸಿಬ್ಬಂದಿ ರವಿ ಉಗ್ರಾಣಿಯವರನ್ನು ಕ್ಷೇತ್ರ  ಪವಿತ್ರಪಾಣಿ ಮಾಧವ ಅಡಿಗರ ಸಮ್ಮುಖದಲ್ಲಿ ಬಹುಮಾನ ನೀಡಿ ಅಭಿನಂದಿಸಿದರು.  ಈ ಸಂದರ್ಭ ದಲ್ಲಿ ಅರ್ಕುಳ ಕಂಪ ದಯಾನಂದ ಆಳ್ವ,  ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *