ಮೂಡುಬಿದಿರೆ: ಇಲ್ಲಿನ ಶಿವರಾಮ ಕಾರಂತ ಪ್ರತಿಷ್ಠಾನವು ನೀಡುವ 2020ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಗೆ ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮತ್ತು ಪ್ರೊ. ಪ್ರೇಮಶೇಖರ್ ಅವರು ಆಯ್ಕೆಯಾಗಿದ್ದಾರೆ.8a9d0850-7b8a-44c1-8b7e-5df9b1d630e6

ಪ್ರಶಸ್ತಿಯು 20ಸಾವಿರ ಗೌರವ ಸಂಭಾವನೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸಿ.ಎನ್.ರಾಮಚಂದ್ರನ್ ಕನ್ನಡದ ಖ್ಯಾತ ವಿಮರ್ಶಕರಾಗಿದ್ದು ಕನ್ನಡದಲ್ಲಿ 22, ಆಂಗ್ಲ ಭಾಷೆಯಲ್ಲಿ 15 ಗ್ರಂಥಗಳನ್ನು ರಚಿಸಿದ್ದಾರೆ. ಪ್ರೊ.ಪ್ರೇಮಶೇಖರ್‍ರವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದು 14 ಕಥಾ ಸಂಕಲನ, 1 ಕವಿತಾ ಸಂಕಲನ, 15 ಲೇಖನ ಸಂಕಲನಗಳನ್ನು ಹಾಗೂ 2 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.bc422227-8585-41f5-9e06-dd91fcd63fa1

ಹೊರರಾಜ್ಯದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದು ರಾಜ್ಯಶಾಸ್ತ್ರ ಚಿಂತಕರಾಗಿದ್ದಾರೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *