ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಮಹಾನ್ ದೇಶಭಕ್ತ, ಸಂತ ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮದಿನವನ್ನು ತಪೋವನದಲ್ಲಿ ಆಚರಿಸಲಾಯಿತು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಷಾ ಆರತಿ ಮಾಡಿದರು.
ನಂತರ ಶಿವ ಸಹಸ್ರನಾಮ ಪಠಣ ಮತ್ತು ವಿಶೇಷ ಭಜನೆ ಮತ್ತು ಹೋಮ ನಂತರ ಮಂಗಳಾರತಿ ನಡೆಯಿತು. ನಂತರ ಅನ್ನಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೮ ಗಂಟೆಯ ತನಕ ಭಜನಾ ತಂಡಗಳಿದ ಭಜನಾ ಸಂಕೀರ್ತನೆ ನಡೆಯಿತು.
