ಶ್ರೀನಿವಾಸಪುರ: ಮಾವು ಮತ್ತು ಟೊಮೆಟೊ ಬೆಳೆ ರಕ್ಷಣೆಗೆ ರೈತರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಡಿ.ಎಸ್.ಅಂಬಿಕಾ ಹೇಳಿದರು.ತಾಲ್ಲೂಕಿನ ಸಾತಾಂಡ್ಲಹಳ್ಳಿ ಗ್ರಾಮದಲ್ಲಿ ತೊಟಗಾರಿಕಾ ಇಲಾಖೆ ಹಾಗೂ ಕೋಲಾರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ರೈತರ ಬೆಳೆಗಳಿಗೆ ಕೀಟ ಹಾಗೂ ರೋಗ ಹತೊಟಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.೯೦ ರಷ್ಟು ರೈತರು ಮಾವು ಬೆಳೆಯ ಮೇಲೆ ಆಧಾರ ಪಟ್ಟಿದ್ದಾರೆ ಎಂದು ಹೇಳಿದರು.
2svp2ep
ಮಾವು ಮತ್ತು ತರಕಾರಿ ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ಹತೋಟಿಗೆ ಆದ್ಯತೆ ನೀಡಬೇಕು. ತಜ್ಞರ ಸಲಹೆ ಪಡೆದು ಕೀಟ ಹಾಗೂ ರೋಗ ನಾಸಕ ಸಿಂಪಡಿಸಬೇಕು. ಇಲ್ಲವಾದರೆ ಬೆಳೆ ಹಾಳಾಗಿ ನಷ್ಟ ಉಂಟಾಗುತ್ತದೆ. ಮುಖ್ಯವಾಗಿ ಹೂ ಬಿಡುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ನಿಗದಿತ ಸಮಯದಲ್ಲಿ ಮಾತ್ರ ಔಷಧ ಸಿಂಪಡಣೆ ಮಾಡಬೇಕು ಎಂದು ಹೇಳಿದರು.ತೋಟಗಾರಿಕಾ ವಿಜ್ಞಾನಿ ಡಾ. ಜ್ಯೋತಿಕಟ್ಟೆ ಗೌಡರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎಚ್.ಶ್ರೀನಿವಾಸ್ ಎ.ಬೈರೆಡ್ಡಿ ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಮಂಜುನಾಥ್, ಈಶ್ವರ ರೆಡ್ಡಿ ಇದ್ದರು.

By Suddi9

Leave a Reply

Your email address will not be published. Required fields are marked *