ಮಂಗಳೂರು:ಮಂಗಳೂರಿಗೆ ಸಮೀಪದ ಪಡೀಲ್ ಫೈಸಲ್ ನಗರದ 21ನಂಬರಿನ ಸಿಟಿ ಬಸ್ ಚಾಲಕ ಸಂಪತ್ ಪೂಜಾರಿ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ ಮಂಗಳವಾರ ರಾತ್ರಿ ನಡೆದಿದೆ.
ತೀವ್ರ ಗಾಯಗೊಂಡ ಸಂಪತ್ ನನ್ನು ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸುವಂತೆ ಪೋಲೀಸ್ ವರಿಷ್ಠಾಧಿಕಾರಿ ಗೆ ಸೂಚಿಸಿದ್ದಾರೆ.
