ಮೂಡುಬಿದಿರೆ: ಶ್ರೀ ದೇವಿ ಸ್ಪೋರ್ಟ್ಸ್ ಹಾಗೂಕಲ್ಚರಲ್ ಕ್ಲಬ್ ಕೊಡ್ಯಡ್ಕ ಇದರ ಆಶ್ರಯದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹಿಂದೂ ಟ್ರೋಫಿ 2021 ರ ಉದ್ಘಾಟನೆಯನ್ನು ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹರಿನಾರಾಯಣದಾಸ ಅಸ್ರಣ್ಣ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷರಾದ ಸುದರ್ಶನ್ ಮೂಡುಬಿದಿರೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಚರಿತ ಶೆಟ್ಟಿ, ಸಂತೋಷ್ ಪೊಳಲಿ, ಚಂದ್ರಶೇಖರ್ ನಾಯ್ಕ್, ಹರೀಶ್ ದೇವಾಡಿಗ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
