ಮೂಡುಬಿದಿರೆ: ಅಳಿಯೂರು ವಾಲ್ಪಾಡಿಯ ಮಜಲೋಡಿಗುತ್ತಿನ ಹಿರಿಯ ಕೃಷಿಕ, ಸಹಕಾರಿ, ಧಾರ್ಮಿಕ, ಸಾಮಾಜಿಕ ಮುಖಂಡರಾಗಿದ್ದ ಪ್ರಕಾಶ್ ಶೆಟ್ಟಿ (72) ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಅಳಿಯೂರು ಆದಿನಾಥ ಬಸದಿಯ ಆಡಳಿತ ಮೊಕ್ತೇಸರರಾಗಿದ್ದ ಅವರು ನೆಲ್ಲಿಕಾರು ಸೊಸೈಟಿಯ ಮಾಜಿ ಅಧ್ಯಕ್ಷರಾಗಿದ್ದರು. ತಮ್ಮ ಹಿರಿಯರಿಂದ ನೀಡಲಾದ ನಿವೇಶನದಲ್ಲಿ ಅರಳಿದ ಅಳಿಯೂರಿನ ಹಿರಿಯ ಪ್ರಾಥಮಿಕ ಶಾಲೆಯ ಬೆಳವಣಿಗೆಯಲ್ಲಿ, ಹೈಸ್ಕೂಲಿನ ಅಭಿವೃದ್ಧಿ ಸಮಿತಿಯಲ್ಲೂ ಅವರು ಸಕ್ರಿಯರಾಗಿದ್ದ ಅವರು ಅಳಿಯೂರು ಗರಡಿಯ ಗೌರವಾಧ್ಯಕ್ಷರಾಗಿದ್ದರು.

By Suddi9 Author

Suddi9

Leave a Reply

Your email address will not be published. Required fields are marked *