ಬಂಟ್ವಾಳ: ಕಳೆದ ಎರಡೂವರೆ ವವರ್ಷಗಳ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ರೂ ೪೬೦ ಕೋಟಿಗೂ ಮಿಕ್ಕಿ ಅನುದಾನ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹರಿದು ಬಂದಿದೆ. ಇದರಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಜನತೆಗೆ ಬಿಜೆಪಿ ಬೆಂಬಲಿಸಿದ್ದಾರೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.11btl-Rayee

ಇಲ್ಲಿನ ರಾಯಿ-ಕೊಯಿಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಕೈತ್ರೋಡಿಯಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವಿಜೇತ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ೧೬೦ ಗ್ರಾಮ ಪಂಚಾಯಿತಿನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.

ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಳೆದ ೫೮ ವರ್ಷಗಳಲ್ಲಿ ದೇಶ ಆಳಿದ ನಕಲಿ ಗಾಂಧಿಗಳು ದೇಶವನ್ನೇ ದುರ್ಬಲಗೊಳಿಸಿದ್ದಾರೆ. ಇದೀಗ ಜಗತ್ತು ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರು ದಿನವಿಡೀ ನಿಸ್ವಾರ್ಥದಿಂದ ದುಡಿದು ದೇಶದ ಘನತೆ ಹೆಚ್ಚಿಸಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುAಗಪ್ಪ ಬಂಗೇರ ಮಾತನಾಡಿ, ಕೇರಳ ಮಾದರಿಯಲ್ಲಿ ಪಕ್ಷದ ಚಿಹ್ನೆಯಡಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕು ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಬಿ.ಅರಳ ಶುಭ ಹಾರೈಸಿದರು. ಇದೇ ವೇಳೆ ರಶ್ಮಿತ್ ಶೆಟ್ಟಿ ಕೈತ್ರೋಡಿ ನೇತೃತ್ವದ ವಿಜೇತ ಸದಸ್ಯರನ್ನು ಶಾಸಕರು ಅಭಿನಂದಿಸಿದರು. ಪ್ರಮುಖರಾದ ನಿರುಪಮಾ ಎಸ್.ಭಂಡಾರಿ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ರತ್ನಕುಮಾರ್ ಚೌಟ, ಉಮೇಶ ಡಿ.ಎಂ.ಅರಳ, ಕೆ.ಪರಮೇಶ್ವರ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ದಯಾನಂದ ಸಪಲ್ಯ, ಹರೀಶ ಆಚಾರ್ಯ, ದಾಮೋದರ ಬಂಗೇರ, ಇಂದಿರಾ ಮಧುಕರ ಬಂಗೇರ ಮತ್ತಿತರರು ಇದ್ದರು.

ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಸಂತ ಕುಮಾರ್ ಅಣ್ಣಳಿಕೆ ಸ್ವಾಗತಿಸಿ ವಂದಿಸಿದರು. ಆರಂಭದಲ್ಲಿ ಅಣ್ಣಳಿಕೆಯಿಂದ ಕೈತ್ರೋಡಿ ತನಕ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಬ್ಯಾಂಡು ವಾದ್ಯ ಸಹಿತ ಚಿಲಿಪಿಲಿ ಗೊಂಬೆ ಬಳಗ ಮತ್ತು ಕೀಲು ಕುದುರೆ ನೃತ್ಯ ಗಮನ ಸೆಳೆಯಿತು.

By Suddi9

Leave a Reply

Your email address will not be published. Required fields are marked *