ಕೈಕಂಬ : ಕೊರೋನಾ ಮಹಾಮಾರಿ ಕ್ಷೀಣಿಸುತ್ತಿದ್ದಂತೆ ಶಾಲೆಗಳು ಆರಂಭವಾಗುತ್ತಿದ್ದು, ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೦ನೇ ತರಗತಿ ಆರಂಭಿಸುವ ಕುರಿತಾಗಿ ಶನಿವಾರ(ಜ. ೨) ಶಾಲಾ ಆಡಳಿತ ಮಂಡಳಿ ಕರೆದಿರುವ ಪಾಲಕರ ಸಭೆಗೆ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.gur-jan-2-vidya jyothi-2

ಶಾಲಾ ಸಂಚಾಲಕಿ ಸಿಸ್ಟರ್ ಜೋಯೆಲ್ ಮಾತನಾಡಿ, ೨೦೨೦ರಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ. ಕಳೆದ ವರ್ಷದ ಶಿಕ್ಷಣ ಕಹಿಯಾಗಿದ್ದರೆ, ಹೊಸ ವರ್ಷದಲ್ಲಿ(೨೦೨೧) ಮಕ್ಕಳ ಭವಿಷ್ಯ ಉಜ್ವಲವಾಗಲಿ. ೧೦ನೇ ತರಗತಿ ವಿದ್ಯಾರ್ಥಿಗಳ ಶಾಲಾ ಹಾಜರಾತಿಗಾಗಿ ಸರ್ಕಾರ ಹೊರಡಿಸಿರುವ ಕೋವಿಡ್-೧೯ ಮಾರ್ಗಸೂಚಿಯನ್ನು ಕ್ರಮಶಃ ಪಾಲಿಸುವಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.

ವಿದ್ಯಾಜ್ಯೋತಿ ಶಾಲೆಯ ೧೦ನೇ ತರಗತಿ ಮಂಗಳವಾರದಿಂದ(ಜ. ೫) ಆರಂಭವಾಗಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ ೧೦ರಿಂದ ಅಪರಾಹ್ನ ೧೨:೩೦ರವರೆಗೆ ತರಗತಿ ಇರುವುದು. ಶಿಕ್ಷಕಿ ಮರ್ಸಿ ಪಿಂಟೋ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಶಿಕ್ಷಕಿ ಚಂಚಲಾಕ್ಷಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ವಾಚಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಲ್ವಿಯಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವೆರೋನಿಕಾ, ರಕ್ಷಕ-ಶಿಕ್ಷಕ ಸಂಘದ(ಪಿಟಿಎ) ಅಧ್ಯಕ್ಷ ರಜಾಕ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪ್ರದೀಪ್ ವಂದಿಸಿದರು.

By suddi9

Leave a Reply

Your email address will not be published. Required fields are marked *