ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.೨೮ ರಿಂದ ಫೆ. ೧೭ರವರೆಗೆ ದೇವರ ದರ್ಶನವಿರುವುದಿಲ್ಲ ಪೊಳಲಿಯಲ್ಲಿ ನಡೆದ ಬ್ರಹ್ಮಕಳಶೋತ್ಸವದ ನಂತರ ದೇವಾಲಯದ ಸಾನಿಧ್ಯದಲ್ಲಿ ಕೆಲವೊಂದು ಸಣ್ಣಪುಟ್ಟ ಕೆಲಸಗಳು ನಡೆಯಲಿದ್ದು ಆಪ್ರಯುಕ್ತ ದೇವಾಲಯದಲ್ಲಿ ಡಿ.೨೭ರಂದು ಅನುಜ್ಙಾಕಳಶದೊಂದಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಪೊಳಲಿ ಕೃಷ್ಣತಂತ್ರೀ,ಸುಬ್ರಹ್ಮಣ್ಯ ತಂತ್ರೀ,ವೆಂಕಟೇಶ್ ತಂತ್ರೀ,ರಾಮಶರಣ ತಂತ್ರೀ ದೇವಸ್ಥಾನದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್,ವಿಷ್ಣೂಮೂರ್ತಿ ನಟ್ಟೋಜ, ಮಾಧವ ಮಯ್ಯ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಮೊಕ್ತೇಸರರಾದ ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್,ಪವಿತ್ರಪಾಣಿ ಮಾಧವ ಭಟ್ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಉಪಸ್ಥಿತರಿದ್ದರು.
