ಕೋಲಾರ: ನರಸಾಪುರ ಸೊಸೈಟಿ ವ್ಯಾಪ್ತಿಯಲ್ಲಿ ಬಡವರ ಬಂಧು ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವುದಾಗಿಯೂ ಮತ್ತು ಬ್ಯಾಂಕ್ ವಿರುದ್ದ ಮಾತನಾಡುವ ಟೀಕಾಕಾರರಿಗೆ ನಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.ತಾಲ್ಲೂಕಿನ ನರಸಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೨೦೧೯-೨೦ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ನಾನೂ ಓರ್ವ ರೈತನ ಮಗನೇ, ಅಧಿಕಾರ ಸಿಕ್ಕಾಗ ಮೆರೆಯಲಿಲ್ಲ,ದಿವಾಳಿಯಾಗಿದ್ದ ಬ್ಯಾಂಕನ್ನು ಉಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ, ನಮ್ಮ ಈ ಕಾರ್ಯದಲ್ಲಿ ಇಡೀ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನನ್ನೊಂದಿಗೆ ಕೆಲಸ ಮಾಡಿದೆ ಎಂದು ತಿಳಿಸಿದರು.1

ಸಾಲ ನೀಡುವಾಗ, ರೈತರು,ಮಹಿಳೆಯರು ಯಾರಿಗಾದರೂ ಲಂಚ ನೀಡಿದ್ದರೆ ಬಹಿರಂಗವಾಗಿ ತಿಳಿಸಿ, ಬೈರೇಗೌಡರು ಈ ಭಾಗದಲ್ಲಿ ತಮ್ಮ ನೇರನುಡಿ ಕೆಲಸಗಳಿಂದ ನೆನಪಿನಲ್ಲಿ ಉಳಿದಿದ್ದಾರೆ, ಅವರ ಕಾಲದ ಈ ಸೊಸೈಟಿ ಎಂದು ೩೫ ಲಕ್ಷ ಲಾಭ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಾಲಕ್ಕೆ ಮಾತ್ರವೇಡಿಸಿಸಿ ಬ್ಯಾಂಕಲ್ಲಈ ಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿ ಸದಸ್ಯರ ಉಳಿತಾಯ ಖಾತೆಯೂ ಡಿಸಿಸಿ ಬ್ಯಾಂಕ್ ಅಥವಾ ಸೊಸೈಟಿಯಲ್ಲಿ ಮಾಡಿಸಿ, ಈ ಭಾಗದ ಪ್ರತಿ ಕುಟುಂಬಕ್ಕೂ ಸಾಲ ಸೌಲಭ್ಯ ಒದಗಿಸುವ ನನ್ನ ಸಂಕಲ್ಪಕ್ಕೆ ಶಕ್ತಿ ತುಂಬಿ ಎಂದರು.ಬ್ಯಾಂಕಿಗೆ ಇದ್ದ ಕೆಟ್ಟಹೆಸರು,ಕೆಟ್ಟಕಾಲ ದೂರ ಮಾಡಿದ್ದೇವೆ, ಈಗ ಒಳ್ಳೆಯ ಕಾಲ ಬಂದಿದೆ, ಪ್ರತಿ ರೈತ,ಮಹಿಳೆಯೂ ಸೊಸೈಟಿಯಲ್ಲಿ ಉಳಿತಾಯ ಖಾತೆ ತೆರೆದು ವಹಿವಾಟು ನಡೆಸಿ ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಒದಗಿಸುವ ಶಕ್ತಿ ನೀಡಿ ಎಂದರು.ನಮ್ಮ ಬ್ಯಾಂಕ್,ನಮ್ಮ ಸೊಸೈಟಿ ಎಂಬ ಭಾವನೆ ಬೆಳೆಸಿಕೊಳ್ಳಿ, ಹಿಂದೆ ಅಧಿಕಾರ ನಡೆಸಿದವರ ಲೋಪಗಳಿಂದ ಬ್ಯಾಂಕ್ ಹೆಸರು ಹಾಳಾಗಿತ್ತು, ಅದನ್ನು ಸರಿಪಡಿಸಿದ್ದೇವೆ,ಬ್ಯಾಂಕ್ ಗೌರವ ಉಳಿಸಿ ಕಪ್ಪುಚುಕ್ಕೆ ಅಳಸಿ ಹಾಕಿದ್ದೇವೆ ಎಂದರು.25kolar1 (1)

ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್, ನಿಮ್ಮ ವಹಿವಾಟು ಉಳಿತಾಯಕ್ಕೆ ವಾಣಿಜ್ಯ ಬ್ಯಾಂಕ್ ಎಂದರೆ ಯಾವ ನ್ಯಾಯ, ನಿಮ್ಮನ್ನು ಕೂರಿಸಿ ಸಾಲ ನೀಡುತ್ತೇವೆ, ಅಲೆಸುವುದಿಲ್ಲ, ಜೀವ ಕಳೆದುಕೊಂಡಿದ್ದ ನರಸಾಪುರ ಸೊಸೈಟಿಗೆ ಜೀವ ತುಂಬಿದ್ದೇವೆ, ಇಂದು ೩೦ ಕೋಟಿ ರೂ ಸಾಲ ನೀಡಿಕೆ ಸಾಮಾನ್ಯ ವಿಷಯವಲ್ಲ , ಈ ಸಾಲಿನಲ್ಲಿ ೩೫ ಲಕ್ಷ ಲಾಭ ಗಳಿಸಿರುವುದು ಅಧ್ಯಕ್ಷ ಮುನಿರಾಜು ಅವರ ತಂಡದ ಸಾಧನೆ ಎಂದು ಅಭಿನಂದಿಸಿದರು.ಮುಂದೆ ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ನೀಡೋಣ, ಹಸು ಸಾಲ, ಹುಳು ಮನೆಗೆ ಸಾಲ, ಕೋಳಿ ಫಾರಂ, ಹಂದಿ ಫಾರಂಗೂ ಸೇರಿದಂತೆ ರೈತರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ ನೀಡಲು ನಮಗೆ ಬದ್ದತೆ ಇದೆ ಎಂದರು.25kolar2

ನರಸಾಪುರ ಕೈಗಾರಿಕಾ ಪ್ರದೇಶವಾಗಿದೆ, ಇಲ್ಲಿನ ಜಮೀನಿಗೆ ಚಿನ್ನದ ಬೆಲೆ ಇದೆ, ಕೆಸಿ ವ್ಯಾಲಿ ನೀರಿನಿಂದ ಕೃಷಿಗೂ ಗೌರವವಿದೆ, ನೀವು ಮುನಿರಾಜು ನೇತೃತ್ವದಲ್ಲಿ ಡಿಸಿಸಿ ಬ್ಯಾಂಕಿಗೆ ಕನಿಷ್ಟ ೨೫ ಕೋಟಿ ರೂ ಠೇವಣಿ ಸಂಗ್ರಹಿಸಿ ನೀಡಿ ಎಂದು ಗುರಿ ನೀಡಿದರು.

೪೭ಕೋಟಿ ವಹಿವಾಟು ೩೫ ಲಕ್ಷ ಲಾಭ

ನರಸಾಪುರ ಸೊಸೈಟಿ ಅಧ್ಯಕ್ಷ ಕೆ.ಎಂ.ಮುನಿರಾಜು, ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿ ಇಂದು ೩೦ ಕೋಟಿ ರೂ ಸಾಲ ನೀಡಿದೆ, ಈ ವರ್ಷದಲ್ಲಿ ೪೭.೬೬ ಕೋಟಿ ರೂ ವಹಿವಾಟು ನಡೆಸಿ ೩೫ ಲಕ್ಷ ರೂ ಲಾಭ ಗಳಿಸಿದೆ ಎಂದು ತಿಳಿಸಿದರು.ಪಡಿತರ ವಿತರಣೆಯನ್ನು ತಮ್ಮ ಗ್ರಾಮದಲ್ಲೇ ಮಾಡಿ ಎಂಬ ಕೆಂದಟ್ಟಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಅವರು, ಸೊಸೈಟಿಗೆ ಅಲ್ಲಿ ಜಾಗ,ಕಟ್ಟಡ ನೀಡಿದರೆ ಮುಂದಿನ ದಿನಗಳಲ್ಲಿ ಅಲ್ಲೇ ವಿತರಣೆಗೆ ಕ್ರಮವಹಿಸುವ ಭರವಸೆ ನೀಡಿದರು.ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಹಕಾರದಿಂದ ಸೊಸೈಟಿ ೩೦ ಕೋಟಿ ಸಾಲ ನೀಡಿರುವುದು ಮಾತ್ರವಲ್ಲ, ಇತ್ತೀಚಿನ ಸಾಲ ಮನ್ನಾ ಯೋಜನೆಗಳಿಂದ ನಮ್ಮ ಸೊಸೈಟಿ ವ್ಯಾಪ್ತಿಯ ರೈತರಿಗೆ ೬.೫೦ ಕೋಟಿ ರೂ ಪ್ರಯೋಜನ ಸಿಕ್ಕಿದೆ ಎಂದು ತಿಳಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಬ್ಯಾಲಹಳ್ಳಿ ಗೋವಿಂದಗೌಡರನ್ನು ಇದೇ ಸಂದರ್ಭದಲ್ಲಿ ಸೊಸೈಟಿಯಿಂದ ಸನ್ಮಾನಿಸಲಾಯಿತು.

ಸೊಸೈಟಿ ವತಿಯಿಂದ ಸೊಸೈಟಿಯ ಹಿರಿಯ ಸದಸ್ಯರಾದ ಕೆಂದಟ್ಟಿ ಬಿಸಣ್ಣ, ಗುಟ್ಟಹಳ್ಳಿ ಬೈರೇಗೌಡ, ಅರಾಭಿಕೊತ್ತನೂರು ನಾಗಪ್ಪ,ಸಿನಂಜುಂಡಪ್ಪ, ಕುರ್ಕಿದೇವರಾಜ್ ನರಸಾಪುರ ಬಸವರಾಜ್,ವಿಶ್ವನಾಥಪುರ ಮುನಿಯಪ್ಪ, ಚೌಡದೇನಹಳ್ಳಿ ಸೊಣ್ಣೇಗೌಡ ಮತ್ತಿತರರಿಗೆ ಗುರುತಿನ ಚೀಟಿ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ಮೈಕ್ರೋ ಎಟಿಎಂಗೆ ಗ್ರಾಹಕರೊಬ್ಬರಿಗೆ ಹಣ ಡ್ರಾಗೆ ಅವಕಾಶ ನೀಡುವ ಮೂಲಕ ಚಾಲನೆ ನೀಡಲಾಯಿತು ಹಾಗೂ ಸೊಸೈಟಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಚೆಂಜಿಮಲೆ ರಮೇಶ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಸೊಸೈಟಿ ಉಪಾಧ್ಯಕ್ಷ ವಾಸುದೇವ, ನಿರ್ದೇಶಕರಾದ ಚನ್ನರಾಯಪ್ಪ,ನಾಗರಾಜ್, ಮೋಹನ್ ಕುಮಾರ್, ಕೆಇಬಿಚಂದ್ರು, ರಾಜಮ್ಮ, ರತ್ನಮ್ಮ, ಈರಯ್ಯ, ಸೊಸೈಟಿ ಸಿಇಒ ನವೀನ್ ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *