ಕೋಲಾರ: ಉಪ ಮುಖ್ಯಮಂತ್ರಿಗಳು,ಸಚಿವ,ಶಾಸಕರು ಪ್ರತಿನಿಧಿಸುವ ರಾಜ್ಯದ ಪ್ರತಿಷ್ಟಿತ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೇರಿದಂತೆ ೧೯ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕಿಗೆ ಆರ್ಥಿಕ ನೆರವು ಒದಗಿಸುವ ಪ್ರಮುಖ ಸಂಸ್ಥೆಯಾಗಿರುವ ಅಪೆಕ್ಸ್ ಬ್ಯಾಂಕಿಗೆ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿನಿಧಿಯಾಗಿ ಗೋವಿಂದಗೌಡ ಅವಿರೋಧವಾಗಿ ಆಯ್ಕೆಯಾಗಿರುವುದು ಜಿಲ್ಲೆಯ ರೈತರು,ಮಹಿಳೆಯರಿಗೆ ಅತಿ ಹೆಚ್ಚು ಸಾಲಸೌಲಭ್ಯ ಒದಗಿಸಲು ಇದು ಸಹಕಾರಿಯಾಗಲಿದೆ.ದಿವಾಳಿಯಾಗಿ, ಗ್ರಾಹಕರಿಗೆ ಠೇವಣಿ ಹಣವನ್ನೂ ಹಿಂದಿರುಗಿಸಲಾರದಷ್ಟು ಪ್ರಪಾತಕ್ಕೆ ಬಿದ್ದಿದ್ದ ಕೋಲಾರ ಡಿಸಿಸಿ ಬ್ಯಾಂಕನ್ನು ಉಳಿಸಿ ಬೆಳೆಸುವ ಮೂಲಕ ಇಂದು ೧೫೦೦ ಕೋಟಿ ರೂ ಸಾಲ ಸೌಲಭ್ಯ ಒದಗಿಸುವ ಶಕ್ತಿ ತುಂಬಿರುವ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಆಡಳಿತ ಮಂಡಳಿ ರಾಜ್ಯದಲ್ಲೇ ಉತ್ತಮ ಹೆಸರು ಪಡೆದಿದೆ.
ಡಿಸಿಸಿ ಬ್ಯಾಂಕ್ ದಿವಾಳಿಯಾಗಿದ್ದಾಗ ಅಧಿಕಾರ ವಹಿಸಿಕೊಂಡ ಗೋವಿಂದಗೌಡಡ ಮತ್ತವರ ಆಡಳಿತ ಮಂಡಳಿ ಬ್ಯಾಂಕ್ ಅಭಿವೃದ್ದಿಗೆ ನೀಡಿದ ಕೊಡುಗೆ ಅಪಾರವಾಗಿದೆ, ಹಿಂದೆ ಬ್ಯಾಂಕಿನ ದುಸ್ಥಿತಿ ಕಂಡು ನೆರವು ನೀಡಲು ಹಿಂದೇಟು ಹಾಕುತ್ತಿದ್ದ ಅಪೆಕ್ಸ್ ಬ್ಯಾಂಕ್ಗೆ ಇಂದು ಅವರೇ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದೇ ನಂಬಲಾಗಿದೆ.ಬ್ಯಾಲಹಳ್ಳಿ ಗೋವಿಂದಗೌಡರೊAದಿಗೆ ರಾಜ್ಯ ಅಪೆಕ್ಸ್ ಬ್ಯಾಂಕ್ಗೆ ನಾಮ ನಿರ್ದೇಶಿತ ಸದಸ್ಯರಾಗಿ ಉಪ ಮುಖ್ಯಮಂತ್ರಿ ಲಕ್ಷö್ಮಣ ಸವದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿAದ, ಉತ್ತರ ಕನ್ನಡ ಜಿಲ್ಲಾ ಕೆನರಾ ಡಿಸಿಸಿ ಬ್ಯಾಂಕ್ನಿAದ ಕಾರ್ಮಿಕ ಸಚಿವ ಶಿವರಾಮ ಮಹಾಬಲೇಶ್ವರ ಹೆಬ್ಬಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಹಾಲಿ ಶಾಸಕ ಶಿವಾನಂದ ಎಸ್.ಪಾಟೀಲ, ಚಿಕ್ಕಮಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಹಾಲಿ ಶಾಸಕ ಬೆಳ್ಳಿ ಪ್ರಕಾಶ್, ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಹಾಸನ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಮಾಜಿ ಶಾಸಕ ಪಟೇಲ್ ಶಿವರಾಂ,ರಾಯಚೂರು ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಶಾಸಕ ಹಾಲಪ್ಪ ಬಸಪ್ಪ ಆಚಾರ್, ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಮಾಜಿ ಸಚಿವ ಡಿ.ಸುಧಾಕರ್, , ಬಾಗಲಕೋಟೆ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಎಂಎಲ್ಸಿ ಸಿದ್ದಪ್ಪ ಕಲ್ಲಪ್ಪ ಸವದಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಡಾ.ಎಂ.ಎನ್.ರಾಜೇAದ್ರಕುಮಾರ್, ಬಳ್ಳಾರಿ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಟಿ.ಎಂ.ಚAದ್ರಶೇಖರಯ್ಯ, ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ನಿAದ ಲಿಂಗರಾಜ ಎಸ್.ಚಪ್ಪರದಳ್ಳಿ, ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಜಗದೀಶಪ್ಪ ಬಣಕಾರ್, ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಬಸವಾನಿ ವಿಜಯದೇವ್, ಮಂಡ್ಯ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಸಿ.ಅಶ್ವತ್ಥ್, ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಕೊಡಂದೇರ ಪಿ.ಗಣಪತಿ, ಮೈಸೂರು-ಚಾಮರಾಜನಗರ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಜಿ.ಡಿ.ಹರೀಶ್, ಬೀದರ್ ಜಿಲ್ಲಾ ಡಿಸಿಸಿ ಬ್ಯಾಂಕ್ನಿAದ ಉಮಾಕಾಂತ ನಾಮನಿರ್ದೇಶಿತ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಆರ್.ಅನಿಲ್ ಕುಮಾರ್ ಘೋಷಿಸಿದ್ದಾರೆ.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಗೆ ಪ್ರತಿನಿಧಿಯ ಹೆಸರನ್ನು ಸಲ್ಲಿಸಿರಲಿಲ್ಲ. ಅಂತೆಯೇ ಕಲಬುರಗಿ-ಯಾದಗಿರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಸ್ತುತ ಸುಸ್ತಿಯಾಗಿ ಮುಂದುವರೆದಿದ್ದು ಹೀಗಾಗಿ ರಾಜ್ಯದ ೧೯ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ತಮ್ಮ ಆಯ್ಕೆಗೆ ಸಹಕಾರ ನೀಡಿದ ಅವಿಭಜಿತ ಜಿಲ್ಲೆಯ ಎಲ್ಲಾ ಶಾಸಕರು, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರು, ಎಲ್ಲಾ ಸಹಕಾರಿಗಳು, ಅವಿಭಜಿತ ಜಿಲ್ಲೆಯ ಸಹಕಾರ ಸಂಘಗಳ ಪ್ರತಿನಿಧಿಗಳು ಎಲ್ಲರಿಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಆಯ್ಕೆಗೆ ಸಹಕಾರ ನೀಡಿದ ಎಲ್ಲರ ನಂಬಿಕೆ ಉಳಿಸಿಕೊಂಡು ಸಹಕಾರಿ ರಂಗದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಯ ಪ್ಯಾಕ್ಸ್ಸೊಸೈಟಿಗಳ ಪರವಾಗಿ ಯಲ್ದೂರು ಸೊಸೈಟಿ ಸಿಇಒ ಪ್ರಭಾಕರ ರೆಡ್ಡಿ ಗೋವಿಂದಗೌಡರನ್ನು ಅಭಿನಂದಿಸಿ ಅವರ ಆಯ್ಕೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
