ಬಂಟ್ವಾಳ:  ಬಂಟ್ವಾಳ ಕ್ಷೇತ್ರದಲ್ಲಿ   ಕಾಂಗ್ರೆಸ್ ಪಕ್ಷದಿಂದ ಬಿಜೆಪಿಯತ್ತ ವಲಸೆ ಬರುವ ಪ್ರಕ್ರಿಯೆ ಮುಂದುವರಿದಿದೆ.ಸೋಮವಾರವು  ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರೋರ್ವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

IMG-20201221-WA0042

ಅಮ್ಟಾಡಿ ಗ್ರಾಪಂ ನ ಮಾಜಿ ಸದಸ್ಯ ಮೋನಪ್ಪ ಪೂಜಾರಿ ಕಲಾಯಿ ಮತ್ತವರ ಬೆಂಬಲಿಗರು  ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.  ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅವರು ಪಕ್ಷದ ಧ್ವಜ ನೀಡಿ,ಶಾಲು ಹಾಕಿ ಬಿಜೆಪಿಗೆ ಬರಮಾಡಿಕೊಂಡರು.

ಈ ಸಂದರ್ಭ ಕ್ಷೇತ್ರದ ಪ್ರ.ಕಾರ್ಯದರ್ಶಿ ಡೊಂಬಯ ಅರಳ,ಬಿಜೆಪಿ ಹಿ.ವರ್ಗ ಮೋರ್ಛಾದ ಜಿಲ್ಲಾ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ,ಬಂಟ್ವಾಳ ಭೂ ಬ್ಯಾಂಕ್ ನಿರ್ದೇಶಕ ಅರುಣ್ ರೋಶನ್ ಡಿಸೋಜ,ಕೇಶವ ದೈಪಲ, ಚಂದ್ರಕಲಾಯಿ, ವಿಶ್ವನಾಥ್,ಸುರೇಶ್ ಕೋಟ್ಯಾನ್ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *