ಶ್ರೀನಿವಾಸಪುರ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ, ಜೆಡಿಎಸ್‌ ಬೆಂಬಲಿತ ಎಲ್ಲಾ 17 ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಚುನಾವಣೆ ಬಳಿಕ ನಡೆದ ಮತ ಎಣಿಕೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಆಯ್ಕೆಯಾದ ಶಿಕ್ಷಕರು ಹಾಗೂ ಶಿಕ್ಷಕಿಯರು, ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.ಮುಖಂಡರಾದ ಮಂಜುನಾಥರೆಡ್ಡಿ, ಜಯರಾಮರೆಡ್ಡಿ, ದಿವಾಕರ್‌, ಆನಂದ್‌, ಶ್ರೀನಿವಾಸಪ್ಪ, ಹರೀಶ್‌ ಕುಮಾರ್‌ ಇದ್ದರು.
ಫಲಿತಾಂಶ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಸದಸ್ಯರಾಗಿ ಶಿಕ್ಷಕರಾದ ವಿ.ರವಿಕುಮಾರ್‌, ಸಿ.ವಿ.ಶಿವಣ್ಣ, ಎಲ್‌.ಆನಂದ್‌, ಕೆ.ರಘುನಾಥರೆಡ್ಡಿ, ಡಿ.ವಿ.ವೆಂಕಟರಾಮರೆಡ್ಡಿ, ಆರ್‌.ಎಸ್‌.ರೆಡ್ಡಪ್ಪ, ಟಿ.ಎಲ್‌.ದಿವಾಕರ, ಎನ್‌.ವಿ.ವೇಣುಗೋಪಾಲ, ವಿ.ಬಯ್ಯಾರೆಡ್ಡಿ, ಜಿ.ಎನ್‌.ಚನ್ನಪ್ಪ, ಎಲ್‌.ಶ್ರೀರಾಮ, ಎಸ್‌.ಮಂಜುನಾಥ, ಶಿಕ್ಷಕಿಯರಾದ ಟಿ.ಎಸ್‌್.ಅನಿತ, ಬಿ.ವಿ.ಅನಿತ, ಎನ್‌.ಮಾಧವಿ, ಎಚ್‌.ವಿ.ಶೋಭಾ, ಕೆ.ವಿ.ಲಕ್ಷ್ಮೀನರಸಮ್ಮ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *