ಶ್ರೀಮತಿ ಇಂದಿರಾ ಶೆಟ್ಟಿ ಮೈಸೂರು ಅವರು ಬರೆದ ಇರುವುದೆಲ್ಲವ ಬಿಟ್ಟು ನಾಟಕ ಸಂಕಲನ ಹಾಗೂ ಭಾವ ಚಿತ್ತಾರ ಕವನ ಸಂಕಲನ ಇದೇ ತಿಂಗಳ 16 ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ಮೈಸೂರಿನ ಪತ್ರಿಕಾಭವನದಲ್ಲಿಲೋಕಾರ್ಪಣೆಗೊ0ಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ,ಸಾಹಿತಿ ಡಾ. ಮಾಲತಿ ಶೆಟ್ಟಿ ಮಾಣೂರು ವಹಿಸಿದರು .ಭಾವ ಚಿತ್ತಾರ ಕವನ ಸಂಕಲನವನ್ನು ಖ್ಯಾತ ಕವಿ ಡಾ. ಜಯಪ್ಪ ಹೊನ್ನಾಳಿ ಮೈಸೂರು ಬಿಡುಗಡೆಗೊಳಿಸಿದರು .

ಇರುವುದೆಲ್ಲವ ಬಿಟ್ಟು ನಾಟಕ ಸಂಕಲನವನ್ನು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರೂ ಖ್ಯಾತ ಕವಿಗಳೂ ಆದ ಡಾ ಭೇರ್ಯ ರಾಮ್ ಕುಮಾರ್ ಅವರು ಬಿಡುಗಡೆಗೊಳಿಸಿದರು . ಸಾಹಿತಿ ,ಚಲನಚಿತ್ರ ನಟ ಡಾ .ಕಾಸರಗೋಡು ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು .

ಈ ಸಂದರ್ಭದಲ್ಲಿ ಲೇಖಕಿ ,ಕವಯಿತ್ರಿ ಇಂದಿರಾ ಶೆಟ್ಟಿ ಮೈಸೂರು ಹಾಗೂ ಬಾರಿಸು ಕನ್ನಡ ಡಿ0ಡಿಮವ ಮಕ್ಕಳ ಚಲನಚಿತ್ರ ನಿರ್ಮಾಪಕರ ಶ್ರೀಮತಿ ಅಶ್ವಿಕಾ ಮೈಸೂರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *