ಬಂಟ್ವಾಳ: ಪುತ್ತೂರು ಸಮೀಪದ ಪೋಳ್ಯ ಬಳಿ ಮಂಗಳವಾರ ನುಸುಕಿನ ಜಾವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರೂ, ಮಂಗಳೂರು ವಿಭಾಗ ಗ್ರಾಮವಿಕಾಸದ ಪ್ರಮುಖ್ ವೆಂಕಟರಮಣ ಹೊಳ್ಳ (೫೯) ಅವರ ಅಂತಿಮ ಸಂಸ್ಕಾರ ಬಿ.ಮೂಡಗ್ರಾಮದ ಅಗ್ರಬೈಲ್ ನಲ್ಲಿರುವ ತೋಟದಲ್ಲಿ ನಡೆಯಿತು. ಇದಕ್ಕು ಮುನ್ನ ಪುತ್ತೂರು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಬಿ.ಸಿ.ರೋಡಿಗೆ ಬಂದಾಗ ಪಾರ್ಥೀವ  ಶರೀರವನ್ನು ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಿಂದ ಅಗ್ರಬೈಲ್ ನಲ್ಲಿರುವ ಅವರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು.ಈ ಸಂದರ್ಭದಲ್ಲಿ ಸಂಘಪರಿವಾರದ ಪ್ರಮುಖರು, ಕಾರ್ಯಕರ್ತರು, ರಾಜಕೀಯ ಮುಖಂಡರು ಹಾಜರಿದ್ದರು.IMG-20201215-WA0069 (1)

ಸಂಘದ ಕಾರ್ಯದಲ್ಲಿ ದಲ್ಲಿ ರಾಜಿ ಇಲ್ಲ ಡಾ.ಭಟ್:

ಕಳೆದ ಐದು ದಶಕಗಳಿಂದ ಸಂಘದ ಕರ‍್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ವೆಂಕಟರಮಣ ಹೊಳ್ಳರು ಸಂಘದ ಕರ‍್ಯ ವಿಧಾನ, ರಾಷ್ಠ್ರೀಯತೆ,ಹಿಂದತ್ವದ ವಿಚಾರ ಬಂದಾಗ ಯಾರೊಂದಿಗೂ ರಾಜೀಮಾಡಿಕೊಳ್ಳದೇ, ಇತರರನ್ನು ದ್ವೇಷಿಸದೆ  ಕಾರ್ಯ ನಿರ್ವಹಿಸುತ್ತಿದ್ದರು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ತಿಳಿಸಿದ್ದಾರೆ. ಮೃತರ ನಿವಾಸದ ವಠಾರದಲ್ಲಿ ನಡೆದ ಶೃದ್ದಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಮಾಜದ ಕೊಚ್ಚೆಯನ್ನು ಸರಿಪಡಿಸಲು ಅವರು ಚಿಂತಿಸುತ್ತಿದ್ದರು ಎಂದರು.IMG-20201215-WA0055

ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ನಿಷ್ಠಾವಂತ ಕಾರ್ಯಕರ್ತರಾಗಿದ್ದ ಹೊಳ್ಳರು ಸಂಘದ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿತ್ತಿದ್ದರು. ಅವರ ಜೀವನ ಶೈಲಿ,ಕಠಿಣವಾದ ಪರಿಶ್ರಮ,ಸೇವಾಮನೋಭಾವ ಎಲ್ಲರಿಗೂ ದಾರಿದೀಪವಾಗಿದೆ ಎಂದರು.ಆರ್ ಎಸ್ ಎಸ್ ಪ್ರಮುಖರಾದ ವಾಮನ ಶೆಣೈ ಮಂಗಳೂರು, ಕಜಂಪಾಡಿ ಸುಬ್ರಹ್ಮಣ್ಯಭಟ್, ದಾ.ಮ.ರವೀಂದ್ರ, ನಾ.ಸೀತಾರಾಮ, ಗೋಪಾಲ ಚೆಟ್ಟಿಯಾರ್,ಕೊಡ್ಮಾಣ್ ಕಾಂತಪ್ಪ ಶೆಟ್ಟಿ,ಅಜೇಯ್ ಕೊಂಬ್ರಬೈಲ್,ನ್ಯಾಯವಾದಿ ಪ್ರಸಾದ್ ಕುಮಾರ್ ರೈ ,ನಾಂದೋಡಿ ಸುಬ್ರಾಯ, ಜಗದೀಶ್,ಸುಭಾಶ್ಚಂದ್ರ,ಸುರೇಶ್,ಪದ್ಮನಾಭ ಬಿ.ಸಿರೋಡ್,ರವಿರಾಜ್ ಬಿ.ಸಿ.ರೋಡ್,ಗೋಪಾಲಕೃಷ್ಣ ಭಟ್, ಕಮಲಾಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾಧ್ಯಕ್ಷ  ಸುದರ್ಶನ್  , ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಎಂ.ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ,ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ,ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನಾಜಿ.ಕೆ.ಭಟ್, ಉದಯಕುಮಾರ್ ರಾವ್ ಬಂಟ್ವಾಳ,ಡೊಂಬಯ ಅರಳ,ಸುಂದರ ಭಂಡಾರಿ ರಾಯಿ,ರಮಾನಾಥ ರಾಯಿ,ಮಚ್ಚೇಂದ್ರ ಸಾಲ್ಯಾನ್,ರಾಮದಾಸ್ ಬಂಟ್ವಾಳ,ಉಮೇಶ್ ಅರಳ,ರತ್ನಕುಮಾರ ಚೌಟ,ಕೇಶವ ದೈಪಲ,  ಕೃಷ್ಣ ಕೊಂಪದವು, ಗೋಪಾಲ ಸುವರ್ಣ , ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ವಿಠಲ ಅಲ್ಲಿಪಾದೆ, ಜಯಪ್ರಕಾಶ್ ಹೆಗ್ಢೆ (ಜೆ.ಪಿ.), ಪದ್ಮನಾಭ ಪಿ.ಕೆ., ದಾಮೋದರ ನೆತ್ತರಕೆರೆ, ಸಹಿತ ನೂರಾರು ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಅಂತಿಮ ಸಲ್ಲಿಸಿದರು.IMG-20201215-WA0072 (1)

ಬಾಲ್ಯದಿಂದಲೇ ಗುರುತಿಸಿದ್ದರು:

ಆರೆಸ್ಸೆಸ್ ಸ್ವಯಂಸೇವಕರಾಗಿ ಬಾಲ್ಯದಿಂದಲೇ ಗುರುತಿಸಿಕೊಂಡಿದ್ದ ಅವರು ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದವರು. ಆರೆಸ್ಸೆಸ್ ನ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಹೊಳ್ಳರು, ಸರಳ ಜೀವಿಯಾಗಿ ಪಾದರಕ್ಷೆಗಳನ್ನು ಧರಿಸದೆ, ಸರಳ ಶ್ವೇತವಸ್ತ್ರದ ಉಡುಗೆಯೊಂದಿಗೆ ಸಂಚರಿಸುತ್ತಿದ್ದರು. ಇತ್ತೀಚೆಗೆ ಗ್ರಾಮವಿಕಾಸ ಸಮಿತಿಯ ಮಂಗಳೂರು ವಿಭಾಗ ಸಂಚಾಲಕರಾಗಿ ಬಿ.ಸಿ.ರೋಡ್, ಸುಳ್ಯ, ಪುತ್ತೂರು ಸಹಿತ ಹಲವೆಡೆ ಯುವಕರಿಗೆ ಆತ್ಮನಿರ್ಬಾರ  ರಾಗುವ ಉದ್ಯೋಗ ತರಬೇತಿಯನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ನಳಿನ್ ಕುಮಾರ್ ಅವರಿಗೂ ಗುರು ಹೊಳ್ಳರು, ದಶಕಗಳಿಂದಲೇ ಹಲವು ತರುಣರನ್ನು ಹುಡುಕಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ‍್ಪಡೆ ಮಾಡುತ್ತಿದ್ದರು.IMG_20201215_130522

ಹೀಗೆಯೇ ಸೇರಿದವರ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ವೆಂಕಟರಮಣ ಹೊಳ್ಳರು ಗುರು, ಮಾರ್ಗದರ್ಶಕರಾಗಿದ್ದರು. ಅವರ ಮನೆಯಲ್ಲಿಯೇ ಸಂಘದ ಶಿಕ್ಷಣವನ್ನು ನಳಿನ್ ಪಡೆದಿದ್ದರು.

ಅದೇ ರೀತಿ ಸಾವಿರಾರು ಯುವಕರಿಗೆ ಹೊಳ್ಳರು ಮಾರ್ಗದರ್ಶನ ನೀಡಿದ್ದಾರೆ. ಬಿ.ಸಿ.ರೋಡಿನ ಹೃದಯಭಾಗದಲ್ಲಿಯೇ ಶುದ್ಧ ಸಾವಯವ ಕೃಷಿಯನ್ನು ಮಾಡುವ ಮೂಲಕ ಸಾವಯವ ಪ್ರಗತಿಪರ ಕೃಷಿಕರಾಗಿಯೂ ಹೊಳ್ಳರು ಗಮನ ಸೆಳೆದವರು. ಅವಿವಾಹಿತರಾದ ಹೊಳ್ಳರು ಸಂಘ,ಸಮಾಜಕ್ಕಾಗಿ ಪರ‍್ತಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಬರಿಗಾಲಲ್ಲಿಯೇ ಇಡೀ ಬಂಟ್ವಾಳ ತಾಲೂಕನ್ನು ಸುತ್ತಾಡಿರುವ ಅವರು ಸಂಘದ ಕಾರ್ಯಕರ್ತರು  ಪ್ರೀತಿ,ವಾತ್ಸಲ್ಯವನ್ನುಗಳಿಸಿದ್ದರು.

ಪಂಚಭೂತಗಳಲ್ಲಿ ಲೀನ:

ಸಾವೀಗೀಡಾದ ವೆಂಕಟ್ರಮಣ ಹೊಳ್ಳರ ಅವರ ಅಂತ್ಯಸಂಸ್ಕಾರ ಅವರ ಮನೆಪಕ್ಕದ ತೋಟದಲ್ಲಿಯೇ ನಡೆಯಿತು.ಮೃತರ ಅಣ್ಣನ ಮಗ ಪ್ರಕಾಶ್ ಅಳಿಯಂದಿರಾದ ಶ್ರೀಧರ್,ಶ್ರೀನಿವಾಸ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಯಿತು.

By suddi9

Leave a Reply

Your email address will not be published. Required fields are marked *