ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ಪ್ರಮುಖ ಕಾರ್ಯಕರ್ತರ ಸಮಾವೇಶವು ಮಂಗಳೂರು ಸಮೀಪದ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಞಾನಮಂದಿರದಲ್ಲಿ ಅಕ್ಟೋಬರ್ 18ರಂದು ಜರಗಲಿರುವುದು.
kateel_1891746f
ಶನಿವಾರ 11.00 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ಪ್ರಹ್ಲಾದ ಜೋಷಿ, ಮಾಜಿ ಸಚಿವ ಶ್ರೀ ಸುರೇಶ್ ಕುಮಾರ್ ಮೊದಲಾದ ಪ್ರಮುಖರು ಭಾಗವಹಿಸಲಿದ್ದು ಸಂಜೆ ಗಂಟೆ 4.30ಕ್ಕೆ ಸಮಾಪನಗೊಳ್ಳಲಿದೆ. ಸದ್ರಿ ಸಮಾವೇಶದಲ್ಲಿ ಉಭಯ ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ಮಾಜಿ ಸಂಸದರು ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳು, ರಾಷ್ಟ್ರೀಯ ಪರಿಷತ್ ಹಾಗೂ ರಾಜ್ಯ ಪರಿಷತ್/ಸಮಿತಿಯ ಸದಸ್ಯರು, ಮೋರ್ಚಾಗಳ ಜಿಲ್ಲಾ ಅಧ್ಯಕ್ಷ ಪ್ರ.ಕಾರ್ಯದರ್ಶಿಗಳು, ಮಂಡಲಗಳ ಅಧ್ಯಕ್ಷ ಪ್ರ.ಕಾರ್ಯದರ್ಶಿ ಗಳು, ತಾ.ಪಂ, ಜಿ.ಪಂ, ಪುರಸಭೆ, ನಗರಸಭೆ, ನಗರಪಾಲಿಕಾ ಸದಸ್ಯರು, ರಾಜ್ಯ,ಜಿಲ್ಲಾಮಟ್ಟದ ಸಹಕಾರಿ ಸಂಸ್ಥೆಗಳ ನಿದರ್ೆಶಕರುಗಳು ಅಪೇಕ್ಷಿತರು ಎಂದು ವಿಭಾಗ ಪ್ರಭಾರಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿರುವರು.

By suddi9

Leave a Reply

Your email address will not be published. Required fields are marked *