ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷ.1vpappa1

ಹಿಂದಿನಕಾಲದಲ್ಲಿ ಬರಗಾಲದಿಂದ ಕೃಷಿಚಟುವಟಿಕೆಗಳು ನಡೆಯದಿದ್ದಾಗ ಸಾವಿರ ಸೀಮೇಗೆ ಒಳಪಟ್ಟ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಯಲ್ಲಿ ಸೀಮೆಯ ಗುರಿಕಾರ ಹಾಗೂ ಊರಿನ ಹಿರಿಯರು ಅರ್ಚಕ ಮನೆತನದವರು ಸೇರಿ ದೇವಿಯಲ್ಲಿ ಪ್ರಾರ್ಥಿಸಿ ಕೃಷಿ, ಭತ್ತ ಬೆಳೆ ಸರಿಯಾಗಿ ಬೆಳೆದು ಕಠಾವಿಗೆ ಬಂದರೆ ಬೆಳೆದ ಬೆಳೆಯಲ್ಲಿ ಒಂದಂಶವನ್ನು ದೇವರಿಗೆ ನೀಡಿ ಅದರಿಂದ ಅಪ್ಪ ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದಾಗಿ ಪ್ರಾರ್ಥಿಸುತ್ತಾರೆ.1vpappa2

ನಂತರ ಭಕ್ತಾಗಳು ಅವರವರ ಜಮೀನಿನಲ್ಲಿ ಬೆಳೆದ ಒಂದಂಶವನ್ನು ದೇವಳಕ್ಕೆ ಒಪ್ಪಿಸಿ ರಸೀದಿ ಪಡೆದು ದೇವರಿಗೆ ನೈವೇಧ್ಯ ಮಾಡಿ ಅಪ್ಪವನ್ನು ಸಮರ್ಪಿಸುತ್ತಿದ್ದರು.ಕೆಲವು ವರ್ಷಗಳಿಂದ ಅಪ್ಪದ ಪೂಜೆಗೆ ವಿವಿಧ ರೀತಿಯ ಅಕ್ಕಿಗಳನ್ನು ಭಕ್ತಾಗಳು ನೀಡುವುದರಿಂದ ಅಪ್ಪ ತಯಾರು ಮಾಡಲು ಕಷ್ಠಕರವಾಗುತ್ತಿತ್ತು ಇದನ್ನರಿತ ಆಡಳಿತ ಮಂಡಳಿಯವರು ಬೆಳ್ತಿಗೆ ಅಕ್ಕಿಯನ್ನು ದೇವಳದ ವತಿಯಿಂದಲೇ ನೀಡಿ ಒಂದು ಮುಡಿ ಸಾಗುವಳಿದಾರರಿಗೆ ಇಂತಿಷ್ಟು ವಂತಿಗೆಯನ್ನು ನೀಡುವಂತೆ ವಿನಂತಿಸಲಾಗಿತ್ತು._DSC0159

ಅದರಂತೆ ಈ ವರ್ಷ ಒಂದು ಲಕೊಟೆಗೆ ೫೦ ರೂಪಾಯಿಗೆ ರಸೀದಿ ಮಾಡಿ ದೇವರ ಪ್ರಸಾದ ರೂಪವಾಗಿ ಅಪ್ಪವನ್ನು ಭಕ್ತಾಗಳಿಗೆ ನೀಡಲಾಯಿತು.

*ಅಪ್ಪ ತಾಯಾರಿಸಲು ಬೇಕಾದ ಸಾಮಾಗ್ರಿ.

ಅಪ್ಪ ತಾಯಾರಿಸಲು ಬೇಕಾದ ಸಾಮಾಗ್ರಿ೩೬ ಮುಡಿ ಅಕ್ಕಿ ,೧೧ ಕ್ವಿಂಟಾಲ್ ಬೆಲ್ಲ, ೨೬೦ಲೀ. ತುಪ್ಪ, ೬೦೦ ತೆಂಗಿನಕಾಯಿ, ೩ ಕೆ.ಜಿ ಏಲಕ್ಕಿ ಬೇಕಾಗುವ ಸಾಮಾಗ್ರಿಗಳು.

* ಭಕ್ತಾಧಿಗಳಿಗೆ ೬೦ ಸಾವಿರ ಅಪ್ಪ 

ಪೊಳಲಿ ದೇವಳದಲ್ಲಿ ಬಾಣಸಿಗರಾಗಿರುವ ಚಂದ್ರಶೇಖರ ರಾವ್ ನೂಯಿ ಅವರ ೩೮ ಬಾಣಸಿಗರ ತಂಡದಿಂದ  ೬. ಕಾವಲಿಯಲ್ಲಿ ಏಕಕಾಲಕ್ಕೆ ೫೫೦ ಅಪ್ಪ ರಡಿಯಾಗಿ ೧೫ ಗಂಟೆಯಲ್ಲಿ ೬೦ ಸಾವಿರ ಅಪ್ಪ ತಯಾರಿಕೆಯಾಗಿದೆ. ರಾತ್ರಿ ೭ ಗಂಟೆಗೆ ರಂಗಪೂಜೆ ನಂತರ ಸುಬ್ರಹ್ಮಣ್ಯ ದೇವರ ಬಲಿ ಮೂರ್ತಿಗೆ ಅಲಂಕರಿಸಿ ದೇವರನ್ನು ಪೀಠದಲ್ಲಿ ಕುಳ್ಳಿರಿಸಿ ತಯಾರಾದ ಒಂದಂಶ ಅಪ್ಪವನ್ನು ಅಡುಗೆ ಶಾಲೆಯಿಂದ ಅಡಳಿತಮಂಡಳಿ ಹಾಗೂ ಅರ್ಚಕರೊಂದಿಗೆ ವಾಧ್ಯಗೋಷ್ಠಿಯೊಂದಿಗೆ ವಿಜೃಂಭಣೆಯಿಂದ ತಂದು ದೇವರ ಮಂಟಪದಲ್ಲಿಟ್ಟು ನೈವೇದ್ಯ ನೀಡಿ ಅಪ್ಪದ ಪೂಜೆ ನೆರವೇರಿಸಲಾಯಿತು.

ನೈವೇದ್ಯ ಮಾಡಿದ ಅಪ್ಪವನ್ನು ತಾಯಾರು ಮಾಡಿದ ಅಪ್ಪದೊಂದಿಗೆ ಸೇರಿಸಲಾಗುವುದು. ನಂತರ ಸ್ವಯಂಸೇವಕರು ೫೦ ರೂಪಾಯಿಯ ರಸಿದಿಗೆ ೫ ಅಪ್ಪದಂತೆ ಲಕೋಟೆಗೆ ತುಂಬಿಸುತ್ತಾರೆ. ನಂತರ ದೇವರ ಉತ್ಸವ ಬಲಿ ಹೊರಟು ಪೀಠ ಪೂಜೆ ನಡೆದ ಬಳಿಕ ವಿಜೃಂಭಣೆಯಿಂದ ಬಲಿ ಉತ್ಸವ ನಡೆಯುತ್ತದೆ. ಸಾವಿರ ಸೀಮೆಯ ಗುರಿಕಾರ ಅಡಳಿತ ಮುಕ್ತೇಸರ  ಅಮ್ಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ ಬ್ರಹ್ಮಾರ್ಪಣೆ  ಬಿಟ್ಟು ಪ್ರಸಾದ ವಿತರಿಸಲಾಗುತ್ತದೆ. ಸಾವಿರ ಸೀಮೆಯ ಭಕ್ತಾಗಳು ಅಪ್ಪ ಸ್ವೀಕರಿಸುತ್ತಾರೆ.

ದೇವಳದ ಪ್ರ. ಅರ್ಚಕ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್,ಸುಬ್ರಹ್ಮಣ್ಯ ತಂತ್ರಿ, ಅನುವಂಶಿಕ ಮೊಕ್ತೆಸರರಾದ ಡಾ.ಮಂಜಯ್ಯ ಶೆಟ್ಟಿ, ಯು.ತಾರಾನಾಥ ಆಳ್ವ, ಚೇರ ಸೂರ್ಯ ನಾರಾಯಣ ರಾವ್  ಕಾರ್ಯನಿರ್ವಹಣಾಕಾರಿ ಪಿ. ಜಯಮ್ಮ  ಹಾಗು ಭಕ್ತಾಧಿಗಳು ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *