ಮೂಡುಬಿದಿರೆ: ಉದಯ್ ಪೂಜಾರಿ ಸಾರಥ್ಯದ ಪ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ಬೆದ್ರ ಘಟಕವು ಮರೋಡಿಯ ಹಡಿಲು ಬಿದ್ದ ಸುಮಾರು 4 ಎಕರೆ ಗದ್ದೆಯಲ್ಲಿ ಸಾಗುವಳಿ ಮಾಡಿ ಭತ್ತ ಬೆಳೆಸಿದ್ದು, ಯೋಜನೆಯಂತೆ ಅದರಲ್ಲಿ ಸಿಕ್ಕಿದ ಮೇವನ್ನು (ಬೈ ಹುಲ್ಲು) ವೇಣೂರು ಸಮೀಪದ ಗುಂಡೂರಿಯ ಕಾವೇರಮ್ಮ ಅಮೃತಧಾರ ಗೋ ಶಾಲೆಗೆ ಹಸ್ತಾಂತರಿಸಲಾಯಿತು.wpid-img-20201127-wa01065329947515044839741.jpg
ಬಿರುವೆರ್ ಕುಡ್ಲ ಬೆದ್ರ ಘಟಕದ ಪ್ರೋತ್ಸಾಹಕರಾದ ಸತೀಶ್ ಕಜಿಪಟ್ಟ ಹಾಗೂ ಸುಜಿತ್ ಬಜಿರೆ ಗೋಶಾಲೆಗೆ ಮೇವನ್ನು ಹಸ್ತಾಂತರಿಸಿದರು. ಬೆದ್ರ ಘಟಕದ ಅಧ್ಯಕ್ಷ ರಾಜ್ ಪವಿ ಬಿಲ್ಲವ, ಸದಸ್ಯರಾದ ಸಂಪತ್ ಅಂಚನ್ ಕುಕ್ಕೇಡಿ, ನಿಶಾಂತ್ ಪೂಜಾರಿ ಮರೋಡಿ, ಸಚಿನ್ ಪೂಜಾರಿ ನಾರಾವಿ ಹಾಗೂ ಪ್ರಜ್ವಲ್ ಬಿರ್ವ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *