ಬಂಟ್ವಾಳ: ಚಿಕ್ಕಮಂಗಳೂರು  ಜಿಲ್ಲೆಯ ಪವಿತ್ರ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಹಿಂದೂ ಅರ್ಚಕರ ನಿಯುಕ್ತಿ ಹಾಗೂ ತ್ರಿಕಾಲ ಪೂಜೆಗೆ ವ್ಯವಸ್ಥೆ ಕಲ್ಪಿಸುವಂತೆ  ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ತಾಲೂಕು ಘಟಕದ  ಒತ್ತಾಯಿಸಿದೆ.ಈ ಬಗ್ಗೆ  ಪುತ್ತೂರು ಜಿಲ್ಲಾ ಗೋರಕ್ಷ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ ಅವರ ನೇತೃತ್ವದ ನಿಯೋಗ ಬುಧವಾರ  ಬಂಟ್ವಾಳ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

IMG-20201125-WA0048
ಈ ಸಂದರ್ಭದಲ್ಲಿ ಭಜರಂಗದಳದ  ಪುತ್ತೂರು ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ,  ಬಂಟ್ವಾಳ ಸಹ ಸಂಚಾಲಕ ಸಂತೋಷ್ ಕುಮಾರ್, ದೀಪಕ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು, ಬಂಟ್ವಾಳ ಪ್ರಖಂಡದ ಸಂಚಾಲಕ ಶಿವಪ್ರಸಾದ್ ತುಂಬೆ, ಧರ್ಮಪ್ರಸಾರಣ್ ಪ್ರಮುಖ್ ರಾಜಾರಾಮ್ ನಾಯಕ್, ರತೀಶ್ ರಾಮಲ್ ಕಟ್ಟೆ ,  ವಿನೀತ್ ಬಂಟ್ವಾಳ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *