ಬಂಟ್ವಾಳ: ದೇಶದ ಹಿತ ಚಿಂತನೆಯ ದೃಷ್ಟಿಯಿಂದ ಸ್ಥಾಪನೆಯಾದ ಬಿಎಂಎಸ್ ಸಂಘಟನೆಯ ಮೂಲಕ ಚಾಲಕ ಸಮುದಾಯ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಶನಿವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡರದ ಬಿ.ಸಿ. ರೋಡ್ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘ ಬಿ.ಯಂ.ಎಸ್. ಬಂಟ್ವಾಳ ತಾಲೂಕು ಘಟಕದ 32ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳದ ಸಮಗ್ರ ಅಭಿವೃದ್ಧಿಯಲ್ಲಿ ರಿಕ್ಷಾ ಚಾಲಕ ಸಮುದಾಯದ ಸಹಕಾರವು ಅಗತ್ಯ ವಿದ್ದು, ಕಾನೂನು ಚೌಕಟ್ಟಿನ ಇತಿಮಿತಿಯನ್ನು ಅರಿತುಕೊಂಡು ಚಾಲಕರು ಕಾರ್ಯನಿರ್ವಹಿಸಿ ಮಾದರಿಯಾಗಬೇಕು ಎಂದರು. ಬಿ. ಯಂ. ಎಸ್. ನ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ರಿಕ್ಷಾ ಚಾಲಕರ ಮಂಡಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ರಿಕ್ಷಾ ಚಾಲಕರು ಇನ್ನುಷ್ಟು ಸುಧಾರಣೆಯಾಗಬೇಕಾಗಿದ್ದು, ಶಿಸ್ತುಬದ್ಧವಾದ ನಡವಳಿಕೆಯ ಮೂಲಕ ಸಮಾಜದಲ್ಲಿ ಗುರುತಿಸಲ್ಪಡುವಂತಾಗಬೇಕು ಎಂದರು. ಸಂಘದ ಕಾನೂನು ಸಲಹೆಗಾರರು, ವಕೀಲ ಜಯರಾಮ ರೈ ,ಪುರಸಭಾ ಸದಸ್ಯ ,ಸಂಘದ ಗೌರವಾಧ್ಯಕ್ಷ ಎ. ಗೋವಿಂದ ಪ್ರಭು ಅತಿಥಿಯಾಗಿದ್ದರು. ಮಾಜಿ ಆಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ, ಸಂಘದ ಅಧ್ಯಕ್ಷ ಸತೀಶ್ ಭಂಡಾರಿಬೆಟ್ಟು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಉತ್ತಮ ಸಂಘಟಕನಾಗಿ ಕೆಲಸ ಮಾಡಿದ ಮಾಜಿ ಅಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಅವರನ್ನು ಸನ್ಮಾನಿಸಲಾಯಿತು.ಸಂಘದ ಗೌರವ ಸಲಹೆಗಾರ ಸದಾನಂದ ನಾವೂರ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ನಾರಾಯಣ ವಂದಿಸಿದರು. ಜೊತೆ ಕಾರ್ಯದರ್ಶಿ ಉಮಾಶಂಕರ್ ದಡ್ಡಲಕಾಡು ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಕೃಷ್ಣ ಗೌಡ ಮಣಿಹಳ್ಳ ಲೆಕ್ಕ ಪತ್ರ ಮಂಡಿಸಿದರು.
ಪ್ರತಿ ವರ್ಷ ಸರಕಾರ ಅಸಂಘಟಿತ ಕಾರ್ಮಿಕರಿಗೆ “ಶ್ರಮ ಸನ್ಮಾನ ” ಆಯ್ಕೆ ಮಾಡಲಾಗುತ್ತಿದ್ದು, “ಶ್ರಮ ಸನ್ಮಾನ” ಕ್ಕೆ ಆಯ್ಕೆಯಾದ ಬಂಟ್ವಾಳದ 4 ಮಂದಿ ರಿಕ್ಷಾ ಚಾಲಕರಾದ ರಾಜೇಶ್, ಚಂದಪ್ಪ, ಕೃಷ್ಣ ಗೌಡ, ವಿಠಲ ಅವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ರಿಕ್ಷಾ ಚಾಲಕರ ಗುರುತಿನಚೀಟಿಯನ್ನು ಸಾಂಕೇತಿಕವಾಗಿ ವಿತರಿಸಲಾಯಿತು.ರಿಕ್ಷಾ ಚಾಲಕರಿಗಾಗಿ ಲಕ್ಕಿ ಕೂಪನ್ ನ ಡ್ರಾ ಇದೇ ಸಂದರ್ಭದಲ್ಲಿ ನಡೆಯಿತು.ಇದರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

