ಬಂಟ್ವಾಳ: ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮಗಳಲ್ಲಾದ ಅಭಿವೃದ್ಧಿ ಕಾಮಗಾರಿ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ನೇತೃತ್ವದ ನಿಯೋಗ ಪರಿಶೀಲನೆ ನಡೆಸಿತು. 

ಇರ್ವತ್ತೂರು ಗ್ರಾಮ ಪಂಚಾಯತ್ ಕಚೇರಿ ಬಳಿ ಸಭಾಭವನ ಕಾಮಗಾರಿ, ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ದಲ್ಲಿ ಸಾರ್ವಜನಿಕ ಸ್ಮಶಾನ ಕಾಮಗಾರಿ, ಇರ್ವತ್ತೂರು ಗ್ರಾಮದ ಪಂಜೋಡಿ ರಸ್ತೆ ಕಾಂಕ್ರೀಟೀಕರಣ,ಮಣ್ಣೂರು ಬಳಿಯ ಕುಡಿಯುವ ನೀರಿನ ಟ್ಯಾಂಕ್ ರಚನೆ, ಪಲ್ಕೆತ್ತು ರಸ್ತೆ ಕಾಂಕ್ರೀಟೀಕರಣ,ಮೂಡುಪಡುಕೋಡಿ ಗ್ರಾಮದ ಕೊಳಲಬಾಕಿಮಾರು ಶಾಲಾ ಆವರಣ ಗೋಡೆ ಮತ್ತು ಮೂಡುಪಡುಕೋಡಿ ಗ್ರಾಮದ ಲೈಸಂದೊಟ್ಯದಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳನ್ನು ಪರಿಶೀಲಿಸಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಗ್ರಾ.ಪಂ. ನಿಕಟಪೂರ್ವ ಸದಸ್ಯರಾದ ಪ್ರಶಾಂತ್ ಕೋಟ್ಯಾನ್,ಜಯಶ್ರೀ, ಸುಧೀಂದ್ರ ಶೆಟ್ಟಿ, ಪ್ರಮುಖರಾದ ಪ್ರಶಾಂತ್ ಜೈನ್, ಗಂಗಾಧರ ಶೆಟ್ಟಿ ,ಗ್ರಾ.ಪಂ. ಕಾರ್ಯದರ್ಶಿ ನಾರಾಯಣ ನಾಯ್ಕ ಕೆ. ಉಪಸ್ಥಿತರಿದ್ದರು
