ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಬಗ್ಗೆ ತಿಳಿದುಕೊಂಡು ಈ ಪುಣ್ಯ ಕ್ಷೇತ್ರದಲ್ಲಿ ತಾಯಿ ರಾಜರಾಜೇಶ್ವರಿ ಸೇವೆಯೊಂದನ್ನು ಮಾಡಬೇಕೆಂದು ಬಯಸಿ ಪೊಳಲಿಗೆ ಕುಟುಂಬ ಸಮೇತರಾಗಿ ಬಂದು ಇಡೀ ಪೊಳಲಿ ದೇವಸ್ಥಾನವನ್ನು ವಿವಿಧ ಹೂವುಗಳು ಮತ್ತು ಹಣ್ಣು ಹಂಪಲುಗಳಿಂದ ಭವ್ಯವಾಗಿ ಸಿಂಗರಿಸಿ ದೇವಿಯ ಸನ್ನಿಧಾನದಲ್ಲಿ ಚಂಡಿಕಾ ಯಾಗವನ್ನು ನೆರವೇರಿಸಿದ್ದಾರೆ. 
ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಿದ ವಿಚಾರವನ್ನು ತಿಳಿದ ಬೆಂಗಳೂರು ಮೂಲದ ಸಮಾಜ ಸೇವಕರಾದ ಬಿಜೆಪಿ ಮುಖಂಡ ಪ್ರಕಾಶ್ ವರ್ಮವ್ ಎಂಬ ಭಕ್ತರೋರ್ವರು ಕ್ಷೇತ್ರದ ಬಗ್ಗೆ ಕುತೂಹಲ ಮೂಡಿ, ಸುರತ್ಕಲ್ ನ ವೈದ್ಯರೊಬ್ಬರಿಂದ ಪೊಳಲಿ ದೇವಳದ ಬಗ್ಗೆ ತಿಳಿದುಕೊಂಡು ಕ್ಷೇತ್ರಕ್ಕೆ ಬಂದಿದ್ದಾರೆ. ಬರುವಾಗ ತನ್ನ ಸಂಭದಿಕರು ಮತ್ತು ಸ್ನೇಹಿತರನ್ನು ಪ್ರತ್ಯೇಕ ಬಸ್ಸಿನಲ್ಲಿ ಕರೆದುಕೊಂಡು ಬಂದು ಊರಿಂದ ತಂದ ಹೂವುಗಳು ಮತ್ತು ಹಣ್ಣುಗಳಿಂದ ಸಂಪೂರ್ಣ ದೇವಸ್ಥಾನವನ್ನು ಶೃಂಗರಿಸಿ ಚಂಡಿಕಾ ಯಾಗವನ್ನು ಮಾಡಿಸಿ ಧನ್ಯತೆಯನ್ನು ಪಡೆದಿದ್ದಾರೆ.
ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ಪದ್ಮನಾಭ ಭಟ್, ಅನಂತ ಭಟ್ ಪೂಜೆ ನೆರವೇರಿಸಿದರು. ದೇವಳದ ಕಾರ್ಯ ನಿರ್ವಹಣಾಧಿಕಾರಿ ಪಿ ಜಯಮ್ಮ , ಬಂಟ್ವಾಳ ಶಾಸಕ ರಾಜೇಶ್ ನಾಯ್ಕೆ ಉಳಿಪಾಡಿ ಇದ್ದರು.
ಈ ಬಗ್ಗೆ ಪ್ರಕಾಶ್ ಅವರು ಸುದ್ದಿ9 ನೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಕ್ಷೇತ್ರದ ಬಗ್ಗೆ ಖುಷಿಯಾಗಿದ್ದು ದೇವಿಯ ಸೇವೆ ಮಾಡಿರುವುದು ಧನ್ಯತಾ ಭಾವ ತಂದಿದೆ ಇನ್ನು ಮುಂದೆ ಸದಾ ತಾಯಿಯ ಸೇವೆ ಮಾಡಬೇಕೆಂಬ ಆಶೆ ಮೂಡಿದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿ ಸದಸ್ಯ ವೇಣುಗೋಪಾಲ್ ಹಾಗೂ ಅವರ ಅಪ್ತರು ಉಪಸ್ಥಿತರಿದ್ದರು.
