ಬಂಟ್ವಾಳ: ತಾಲೂಕಿನ ಪೊಳಲಿ ಕ್ಷೇತ್ರದ ಪಕ್ಕದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಪೊಲೀಸ್ ಹೊರ ಠಾಣೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯವರು ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಹೊರಠಾಣೆ ನಿರ್ಮಿಸಲಾಗಿದ್ದು,ಈ ಭಾಗದಲ್ಲಿ ನಡೆಯುವ ಅಪರಾಧ ಚಟುವಟಿಕೆಯ ಮಾಹಿತಿ ಪಡೆದು ತಕ್ಷಣ ಪೊಲೀಸರಿಗೆ ಸ್ಪಂದಿಸಲು ಅನುಕೂಲವಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಯಶವಂತ ಪೊಳಲಿ, ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಸಬ್ ಇನ್ಸ್ ಪೆಕ್ಟರ್ ಗಳಾದ .ಪ್ರಸನ್ನ , ಅವಿನಾಶ್,ಕಲೈಮಾರ್ ಪಿ. ಸಂಜೀವ ,ರಾಜೇಶ್ ಕೆ.ವಿ. ಉಪಸ್ಥಿತರಿದ್ದರು.
Attachments area

