ಬಂಟ್ವಾಳ : ಮಹಿಳೆಯರಿಗೆ ಗೃಹ ಉದ್ದೇಶಿತ ರೂ. ೨೫ ಸಾವಿರ ತುರ್ತು ಸಾಲ ನೀಡಲಾಗುವುದು,ಸಂಘವು ಮುಂದಿನ ೫ ವರ್ಷಗಳಲ್ಲಿ ೧೦ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ ಎಂದು ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ (ನಿ.) ಸಜಿಪಮೂಡ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಹೇಳಿದರು.

 Sajeepa Photo

 ಸುಭಾಶ್‌ನಗರ ಶ್ರೀ ಗುರು ಕಲ್ಯಾಣ ಮಂಟಪದಲ್ಲಿ ನಡೆದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರದಿ ಸಾಲಿನಲ್ಲಿ ಸಂಘವು ೫೨೮ ಸದಸ್ಯರ ಮೂಲಕ ೨೭.೮೭ ಕೋಟಿ ರೂ. ವ್ಯವಹಾರ ನಡೆಸಿದ್ದು , ರೂ. ೬.೨೨ ಲಕ್ಷ ನಿವ್ವಳ ಲಾಭ ಪಡೆದಿದೆ. ಸಂಘದ ಸದಸ್ಯರಿಗೆ ಶೇ. ೨೦ ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.
ಸಂಘವು ಈ ಹಿಂದೆ ೧೧ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು ಪ್ರಸ್ತುತ ೧೭ ಗ್ರಾಮಗಳ ವ್ಯಾಪ್ತಿಗೆ ವಿಸ್ತರಿಸಿಕೊಂಡಿದೆ.
ಹಾಲಿ ಆರ್ಥಿಕ ವರ್ಷದಲ್ಲಿ ಸಿದ್ಧಕಟ್ಟೆ , ವಾಮದಪದವು ನಗರದಲ್ಲಿ ಶಾಖೆಗಳನ್ನು ತೆರೆಯುವ ತೀರ್ಮಾನ ಮಾಡಿದೆ ಎಂದರು.  ಇತ್ತೀಚೆಗೆ ನಿಧನರಾದ ಬಿಲ್ಲವ ಮುಖಂಡ ದಿ. ಜಯ ಸಿ. ಸುವರ್ಣ ಅವರ ಸೇವೆಯನ್ನು ಸ್ಮರಿಸಿ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಲಾಯಿತು. ಹಿರಿಯ ಮೂರ್ತೆದಾರರಾದ ಕೊರಗಪ್ಪ ಪೂಜಾರಿ ಕೊಟ್ಟಾರಿ ಪಾಲು, ರಾಘವ ಪೂಜಾರಿ ಕಲ್ಲಗುಂಡಿ  ಅವರನ್ನು ಸೇವಾ ಹಿರಿತನಕ್ಕಾಗಿ  ಗೌರವಿಸಲಾಯಿತು.
ಸಭೆಯಲ್ಲಿ ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ನಿರ್ದೇಶಕ ರತ್ನಾಕರ ಪೂಜಾರಿ ನಾಡಾರು, ಗಣ್ಯರಾದ ಮೋನಪ್ಪ ಪೂಜಾರಿ, ವಿಶ್ವನಾಥ ಬೆಳ್ಚಾಡ, ಲೋಕನಾಥ ಪೂಜಾರಿ ಬಿ., ಶಂಕರ ಯಾನೆ ಕೋಚ ಪೂಜಾರಿ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಗೂಡಿನಪಾಲು, ನಿರ್ದೇಶಕರಾದ ವಿಠ್ಠಲ ಬೆಳ್ಚಾಡ ಚೇಳೂರು, ಅಶೋಕ ಕೋಮಾಲಿ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿ ವಸಂತ್ ಉಪಸ್ಥಿತರಿದ್ದರು. ನಿರ್ದೇಶಕರಾದ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ವಂದಿಸಿದರು. ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

 

By suddi9

Leave a Reply

Your email address will not be published. Required fields are marked *