ಗುರುಪುರ : ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯ ನೀರುಮಾರ್ಗ ಪೇಟೆಯಲ್ಲಿ ಶಾಸಕರ ವಿಶೇಷ ಶಿಫಾರಸಿನನ್ವಯ ಬಿಡುಗಡೆಗೊಂಡಿರುವ 9 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾದ ರಿಕ್ಷಾ ನಿಲ್ದಾಣದ ಮೇಲ್ಛಾವಣಿಯನ್ನು ಶಾಸಕ ಡಾ. ಭರತ್ ಶೆಟ್ಟಿ ಭಾನುವಾರ(ನ.15) ಉದ್ಘಾಟಿಸಿದರು.gur-nov-15-nirumarga-2

ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಉಪಾಧ್ಯಕ್ಷ ಲಕ್ಷಮಣ್ ಶೆಟ್ಟಿಗಾರ, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ಪವಿತ್ರಾ ನೀರುಮಾರ್ಗ, ಜಿಪಂ ಮಾಜಿ ಸದಸ್ಯ ಮೆಲ್ವಿನ್ ಡಿ’ಸೋಜ, ರಿಕ್ಷಾ ಪಾರ್ಕ್  ಅಧ್ಯಕ್ಷ ಪ್ರವೀಣ್ ನೊರೊನ್ಹಾ, ಪಂಚಾಯತ್ ಮಾಜಿ ಅಧ್ಯಕ್ಷೆ ಕಸ್ತೂರಿ ನೀರುಮಾರ್ಗ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ, ಪಂಚಾಯತ್ ಮಾಜಿ ಸದಸ್ಯರಾದ ಪುಷ್ಪರಾಜ್ ಮಾಣೂರು, ಚೇತನ್, ಉಷಾ, ಚಂದ್ರಾವತಿ, ಗುಣವತಿ, ಶಶಿಕುಮಾರ್ ಹಾಗೂ ರಿಕ್ಷಾ ಚಾಲಕ-ಮಾಲಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

gur-nov-15-nirumarga-1ಈ ಸಂದರ್ಭದಲ್ಲಿ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಶಾಸಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *