ಬಂಟ್ವಾಳ:ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಬೀಳ್ಕೊಡುಗೆ ಮತ್ತು ಸಮ್ಮಾನ ಕಾರ್ಯಕ್ರಮ ಮಂಗಳವಾರ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯ ಸಭಾಂಗಣದಲ್ಲಿ ಜರಗಿತು.
ಈ ಸಂದರ್ಭದಲ್ಲಿ ೩೧ ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿರುವ ರತ್ನ ಕುಮಾರ ಚೌಟ ಹಾಗೂ ಸಹಾಯಕ ಗಣೇಶ ಗೌಡ ಅವರನ್ನು ಸಮ್ಮಾನಿಸಲಾಯಿತು. ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸಾನದ ಪ್ರ.ಅರ್ಚಕ ಪ್ರಭಾಕರ ಐಗಳ್ ಅವರು ಅಭಿನಂದನಾ ಭಾಷಣ ಮಾಡಿ, ಸಿದ್ದಕಟ್ಟೆ ಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಕಾರಣರಾಗಿ , ಕಾರ್ಯದರ್ಶಿಯಾಗಿ ಹೈನುಗಾರರಿಗೆ ಆಸರೆಯಾಗಿ , ಮುತುವರ್ಜಿಯಿಂದ ಪ್ರಗತಿಯತ್ತ ಮುನ್ನಡೆಸುವುದರೊಂದಿಗೆ ಸಾಮಾಜಿಕ ಸೇವೆ ಸಲಿಸುತ್ತಿರುವ ರತ್ನ ಕುಮಾರ ಚೌಟರ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಸದಾಶಿವ ಅವರು ಮಾತನಾಡಿ, ರತ್ನ ಕುಮಾರ ಚೌಟ ಹಾಗೂ ಗಣೇಶ ಗೌಡ ಅವರ ಸೇವೆ ಅನನ್ಯವಾಗಿದ್ದು, ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿದರು.ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿರ್ದೆಶಕ ಸುಚರಿತ ಶೆಟ್ಟಿ ಅವರು ಮಾತನಾಡಿ, ಸಿದ್ದಕಟ್ಟೆ ಸಂಘದಲ್ಲಿ ನಾಲ್ಕು ಸಾವಿರ ಲೀ. ಹಾಲು ಪೂರೈಸುವಂತಾಗಲು ಕಾರ್ಯದರ್ಶಿ ಅವರ ಶ್ರಮ ಅಭಿನಂದನೀಯ ಎಂದರು. ದ.ಕ. ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕರಾದ ಬಿ.ಸುಧಾಕರ ರೈ, ಸುಚರಿತ ಶೆಟ್ಟಿ, ಸುಭದ್ರಾ ರಾವ್, ಸವಿತಾ ಎನ್.ಶೆಟ್ಟಿ, ವಿಸ್ತರಣಾಧಿಕಾರಿ ಜಗದೀಶ್ ಎ., ಸಂಘದ ಉಪಾಧ್ಯಕ್ಷೆ ಅರುಣಾ ವಿ.ದೋಟ, ನಿರ್ದೇಶಕರು, ಸಿಬಂದ ವರ್ಗ ಉಪಸ್ಥಿತರಿದ್ದರು.
ನಿರ್ದೇಶಕ ಸತೀಶ್ ಪೂಜಾರಿ ಹಲಕ್ಕೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ನಾಯಕ್ ವಂದಿಸಿದರು. ಪ್ರಜ್ವಲ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
