ಬಂಟ್ವಾಳ:ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು  ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ೨೦೨೦-೨೧ನೇ ಸಾಲಿನ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ನೀಡಲಾದ ಮಿನಿ ಟ್ಯಾಕ್ಟರ್ ಹಾಗೂ ಪವರ್ ಟಿಲ್ಲರನ್ನು ಫಲಾನುಭವಿಗಳಿಗೆ ವಿತರಿಸಿದರು.IMG-20201027-WA0055
ಇರ್ವತ್ತೂರು ಗ್ರಾಮ ನಿವಾಸಿ ನಿರಂಜನ್‌ಕುಮಾರ್ ಅವರಿಗೆ ಮಿನಿ ಟ್ಯಾಕ್ಟರ್ ಹಾಗೂ ಬಿಳಿಯೂರು ಗ್ರಾಮ ನಿವಾಸಿ ವೆಂಕಪ್ಪ ನಾಯ್ಕ ಅವರಿಗೆ ಪವರ್ ಟಿಲ್ಲರ್ ವಿತರಿಸಲಾಯಿತು. ಇದರಲ್ಲಿ ಟ್ಯಾಕ್ಟರ್‌ಗೆ ೭೫ ಸಾವಿರ ರೂ. ಹಾಗೂ ಟಿಲ್ಲರ್‌ಗೆ ೧ ಲಕ್ಷ ರೂ.ಸರಕಾರದ ಸಹಾಯಧನ ನೀಡಲಾಗಿದೆ.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹಾಗೂ ಸಿಬಂದಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *