ಕೋಲಾರ: ವಿಧಾನಪರಿಷತ್‌ನಲ್ಲಿ ಜನಪರ ಹಾಗೂ ಅಭಿವೃದ್ದಿಪರ ಚಿಂತನೆಗಳು ಬಲಗೊಳ್ಳಲು ಜೆಡಿಎಸ್‌ನಿಂದ ಆಗ್ನೇಯ ಪದವಿಧರರ ಕ್ಷೇತ್ರದಿಂದ ಕಣಕ್ಕಿಳಿದಿರುವ ಚೌಡರೆಡ್ಡಿರನ್ನು ಬೆಂಬಲಿಸಿ ಎಂದು ಪದವಿಧರರಿಗೆ ಮಾಜಿ ಸಚಿವ ಬಸವರಾಜಹೊರಟ್ಟಿ ಮನವಿ ಮಾಡಿದರು.25kolar9

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಮತಯಾಚಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಪದವೀಧರರನ್ನು ಕಡೆಗಣಿಸಿವೆ, ೨ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, ಇಂದು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಯುವಕರಿದ್ದಾರೆ ಎಂದು ಟೀಕಿಸಿದರು.ಚೌಡರೆಡ್ಡಿ ಅವರು ಸದನದಲ್ಲಿ ಶೈಕ್ಷಣಿಕ ಮತ್ತು ಜಿಲ್ಲೆಯ ಅಭಿವೃದ್ದಿ ವಿಷಯಕ್ಕೆ ಸಂಬಧಿಸಿದ ನನ್ನೊಂದಿಗೆ ಹೋರಾಡಿದ್ದಾರೆ, ಇಂತಹ ಕಾಳಜಿ ಇರುವ ವ್ಯಕ್ತಿಗಳು ಪರಿಷತ್‌ಗೆ ಬರಬೇಕು ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎ.ಎಸ್.ನಂಜುಡೇಗೌಡ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *