ಆಸಕ್ತ ಯುವಜನರಿಂದ ಅಶಕ್ತ ಬಡವರಿಗಾಗಿ ಎಂಬ ಧ್ಯೇಯದೊಂದಿಗೆ ತಮ್ಮ ಕಷ್ಟಗಳ ನಡುವೆಯೂ ಇತರರ ಕಷ್ಟಕ್ಕೆ ಸ್ಪಂದಿಸುತ್ತಾ ಮುವೃತ್ತಿಯಲ್ಲಿನ್ನಡೆಯುತ್ತಿರುವ ಹಿಂದೂ ವಾರಿಯರ್ಸ್ ತಂಡವು 65 ನೇ ಸಹಾಯ ಯೋಜನೆಯನ್ನುಮಂಗಳೂರಿನ ಸುರತ್ಕಲ್ ಮಧ್ಯ ಅಂಬೆಡ್ಕರ್ ಕಾಲೊನಿ ನಿವಾಸಿಯಾಗಿರುವ ದಿವಂಗತ ರಾಮಪ್ಪ ಅವರ ಪತ್ನಿ 55 ವರ್ಷದ ಲಕ್ಷ್ಮಿ ಇವರ ಕುಟುಂಬಕ್ಕೆ ಅ.18ರಂದು ಭಾನುವಾರ ನೀಡಿದರು.
ಇವರ ಮಗ, 25ವರ್ಷ ಪ್ರಾಯದ ಸುರೇಶ್ ವೃತ್ತಿಯಲ್ಲಿ ಪೈಂಟರ್ . ಇವರ ಮನೆಯು ಇಂದೋ ನಾಳೆಯೋ ಬೀಳೋ ಪರಿಸ್ಥಿತಿಯಲ್ಲಿರುವ ಮುರುಕಲು ಮನೆಯಲ್ಲಿ ವಾಸವಾಗಿದ್ದು ಬಡತನದಿಂದ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು ಇದ್ದಕ್ಕಿದ್ದಂತೆ ದುಡಿಯುತ್ತಿದ್ದ ಮಗ ಅಸೌಖ್ಯದಿಂದ ಹಾಸಿಗೆ ಹಿಡಿದು ಈಗ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ.ದೈನಂದಿನ ಜೀವನ ನಡೆಸಲು ದುಸ್ತರವಾಗಿರುವ ಈ ಕುಟುಂಬಕ್ಕೆ ಅಧಾರ ಸ್ತಂಭದಂತಿದ್ದ ಮನೆಮಗ ಸೋರುತ್ತಿರುವ ಕುಸಿಯುವ ಹಂತದಲ್ಲಿರುವ ಮನೆಯಲ್ಲಿ ಈ ರೀತಿ ಮಲಗಿರುವುದು, ಇನ್ನೊಂದೆಡೆ ಮಗನ ಚಿಕಿತ್ಸೆಯ ಜತೆ ದಿನನಿತ್ಯದ ಆಹಾರಕ್ಕೂ ತತ್ಪರವಾಗಿರುವ ಕಾರಣ ಸಮಾಜದ ಮುಂದೆ ನೆರವು ಬಯಸಿದ್ದರು.*ಇವರ ಮನವಿಗೆ ಸ್ಪಂದಿಸಿದ ಹಿಂದೂ ವಾರಿಯರ್ಸ್ ನಮ್ಮ ಸದಸ್ಯರಿಂದ ಸಂಗ್ರಹಿಸಿದ ರೂ 20000 ಗಳನ್ನು ಅ. 18ರಂದು ಭಾನುವಾರ ಸಂತ್ರಸ್ತರ ಮನೆಗೆ ಬೇಟಿ ನೀಡಿ ತಂಡದ ಸದಸ್ಯರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.*ಈ ಯೋಜನೆಗೆ ಸಹಾಯಧನ ವಿತ್ತು ಸಹಕರಿಸಿದ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ.ನಿಮ್ಮ ಸಹಕಾರ ಇನ್ನೂ ಮುಂದಿನ ಯೋಜನೆಗಳಿಗೂ ಹೀಗೆ ಇರಲೆಂಬ ಆಶಯದೊಂದಿಗೆ “ಹಿಂದೂ ವಾರಿಯರ್ಸ್”
