ಗುರುಪುರ : ಕಾವೂರು ಶಾಂತಿನಗರದ ಹಿಂದೂ ಯುವ ಸೇನೆ, ಶ್ರೀಶಕ್ತಿ ಶಾಖೆ ಮತ್ತು ಶ್ರೀರಾಮ ಭಜನಾ ಮಂದಿರ(ರಿ) ಇದರ ಸಹಭಾಗಿತ್ವದಲ್ಲಿ ಮಾಜಿ ಕಾರ್ಪೊರೇಟರ್ ದಿ. ಮಧುಕಿರಣ ಸ್ಮರಣಾರ್ಥ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುಂಟಿಕಾನದ ಸಹಯೋಗದಲ್ಲಿ ಅ. 18ರಂದು ಶಾಂತಿನಗರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡು ನೋಮದಣಿ ಅಭಿಯಾನ, ಗುರುತಿನ ಚೀಟಿ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಡಾ. ಭರತ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಜಿಲ್ಲಾ ಬಿಜೆಪಿ ಮುಖಂಡ ರಣದೀಪ್ ಕಾಂಚನ್, ಹಿಂದೂ ಯುವ ಸೇನೆ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಪಾಲಿಕೆ ಕಾರ್ಪೊರೇಟರ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಹಿಂದೂ ಯುವ ಸೇನೆ ಪದಾಧಿಕಾರಿಗಳು, ಎ ಜೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ, ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
