ಪೊಳಲಿ: ನಮ್ಮ ಸಂಘಟನೆಯ ಕಾರ್ಯಕರ್ತರಿಂದ ಉತ್ತಮ ಕೆಲಸ ಆಗುತ್ತಿದೆ. ನಮ್ಮ ಶಕ್ತಿಯನ್ನು ಉತ್ತಮ ಕೆಲಸಗಳಿಗೆ ವಿನಿಯೋಗಿಸಬೇಕು. ಅದಕ್ಕೆ ಸಮಾಜದಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಇಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳಾಗಲಿ. ಸಮಾಜದ ಕಟ್ಟಕಡೆಯ ಮಂದಿಗೆ ಮನೆ ನಿರ್ಮಿಸುವ ಕೆಲಸಕ್ಕೆ ಸಹಾಯ ಮಾಡುವೆ. ಬಡವರಿಗೆ ನೆರವಾಗೋಣ. ಸಮಾಜದ ಒಳಿತಿಗಾಗಿ ಯುವಜನರು ತಮ್ಮ ಶಕ್ತಿ ವ್ಯಯಿಸಬೇಕು. ಸಮಸ್ಯೆಯಾದಾಗ ನನ್ನಲ್ಲಿಗೆ ಬನ್ನಿ, ನಿಮ್ಮ ಕೆಲಸ ಮಾಡಲೆಂದೇ ನಾನಿರುವುದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

18vp polali022

ಹಿಂದೂ ಜಾಗರಣ ವೇದಿಕೆ ವತಿಯಿಂದ ಮಂಗಳೂರು-ಪೊಳಲಿ-ಬಿ ಸಿ ರೋಡ್ ರಸ್ತೆಯಲ್ಲಿ(ಪೊಳಲಿ) ನಿರ್ಮಿಸಲಾದ ನೂತನ ಬಸ್ ತಂಗುದಾಣ ಉದ್ಘಾಟಿಸಿ ನಾಯ್ಕ್ ಮಾತನಾಡಿದರು.18vp polali01

ಸಮಾರಂಭದಲ್ಲಿ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ರಾಜಾರಾಮ್ ಭಟ್, ದೇವಪ್ಪ ಪೂಜಾರಿ, ಪ್ರಭಾಕರ ಪ್ರಭು, ಡೊಂಬಯ ಅರಳ, ವೆಂಕಟೇಶ್ ಪೊಳಲಿ, ತಾಪಂ ಸದಸ್ಯ ಯಶವಂತ ಪೊಳಲಿ, ಜಗದೀಶ ಆಳ್ವ, ಜಗದೀಶ್ ಕತ್ತಲ್ಕೆರೆ, ಕಿಶೋರ್ ಮಂಗಳೂರು, ಭುವನೇಶ್ ಪಚ್ಚಿನಡ್ಕ, ಶಮಿತ್‍ರಾಜ್ ಬೆದ್ರ, ಚಂದ್ರಾವತಿಪೊಳಲಿ , ಭಾರತಿ ದಿನೇಶ್, ಲೋಕೇಶ್ ಕೋಡಿಕೆರೆ, ವಿಶ್ವ ಕೋಡಿಕೆರೆ, ಹರೀಶ್ ಮಂಗಳೂರು(ಮಂಗಳೂರು ಜಿಲ್ಲಾಧ್ಯಕ್ಷ), ಸಂದೀಪ್ ಅಂಬ್ಲಮೊಗರು, ಶೇಖರ ಪದವಿನಂಗಡಿ, ಮನೋಜ್ ಪದವಿನಂಗಡಿ, ಯಶೋಧರ ಕಲ್ಕುಟ, ಬೃಜೇಶ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.18vp 2

By suddi9

Leave a Reply

Your email address will not be published. Required fields are marked *