ಬಂಟ್ವಾಳ :ವಿಧಾನಸಭಾ ಕ್ಷೇತ್ರದ 39ಗ್ರಾಮಪಂಚಾಯತ್ ಕಚೇರಿಯ ಮುಂಭಾಗ ಇದೇ ಅ. 13 ರಂದು ಮಂಗಳವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಸರಿಯಾಗಿ ಏಕಕಾಲದಲ್ಲಿ ಸಾಮೂಹಿಕ ಪ್ರತಿಭಟನೆ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈಯವರ ಮಾರ್ಗದರ್ಶನದಂತೆ ರಾಜ್ಯ ಬಿಜೆಪಿ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ಹಾಗೂ ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಸ್ಥಳೀಯ ಪಂಚಾಯತ್ ಕಛೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ .

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸರಕಾರದ ಸವಲತ್ತುಗಳಿಂದ ವಂಚಿತರಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಬೇಬಿ ಕುಂದರ್ ಅಧ್ಯಕ್ಷರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಸುದೀಪ್ ಕುಮಾರ್ ಶೆಟ್ಟಿ ಅದ್ಯಕ್ಷರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ. ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *